ಉಳ್ಳಾಲ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ಮಜ್ಲಿಸುನ್ನೂರ್
ಮಂಗಳೂರು, ಜೂ.15: ಎಸ್ಕೆಎಸ್ಸೆಸ್ಸೆಫ್ ಉಳ್ಳಾಲ ಘಟಕದ ವತಿಯಿಂದ ಸಮಸ್ತ ದ.ಕ. ಜಿಲ್ಲಾ ಉಪಾಧ್ಯಕ್ಷ ಶೈಖುನಾ ಇಬ್ರಾಹೀಂ ಬಾಖವಿ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಳ್ಳಾಲ ಮೇಲಂಗಡಿ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಹೊಸಪಳ್ಳಿ ಜುಮಾ ಮಸ್ಜಿದ್‌ನ ಮುಅಝ್ಝಿನ್ ಸಿದ್ದೀಕ್ ಝುಹ್‌ರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ, ಸಂಶುಲ್ ಉಲೆಮಾ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಯು.ಟಿ. ಮುಹಮ್ಮದ್, ಉಪಾಧ್ಯಕ್ಷ ಕೆ.ಎಸ್. ಮೊಯ್ದಿನ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಬಶೀರ್ ಇಸ್ಮಾಯೀಲ್, ಹೊಸಪಳ್ಳಿ ಮಸೀದಿಯ ಉಪಾಧ್ಯಕ್ಷ ಬಶೀರ್ ಗುಂಡಿಹಿತ್ಲು, ಕಾರ್ಯದರ್ಶಿ ಅಬ್ದುರ್ರಝಾಕ್ ಹರೇಕಳ, ಸದಸ್ಯರಾದ ಅಶ್ರಫ್ ಮೇಲಂಗಡಿ, ಅಬ್ದುಲ್ ಖಾದರ್ ಹಾಜಿ ಅಝಾದ್ ನಗರ, ಅಶ್ರಫ್ ಪುತ್ತುಬಾವ ಹಾಜಿ, ಹೈದರ್ ಉಳ್ಳಾಲ ಬೈಲ್, ಅಬ್ಬು ಹಿಲರಿನಗರ, ಉಮ್ಮರ್ ಹಸನಬ್ಬ, ಬಿ. ಅಹ್ಮದ್ ಬಾವಾ ಉಪಸ್ಥಿತರಿದ್ದರು.
Next Story





