ಬೈಕ್‌ಗೆ ಕಾರು ಢಿಕ್ಕಿ
ಮಂಗಳೂರು, ಜೂ.15: ಕಾವೂರು ಜಂಕ್ಷನ್‌ನಲ್ಲಿ ಜೂ.13ರಂದು ಅಪರಾಹ್ನ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಘಟನೆ ನಡೆದಿದ್ದು, ಆರೋಪಿ ಚಾಲಕನ ವಿರುದ್ಧ ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಜ್ಪೆ ರಾಕೇಶ್ ಪೂಜಾರಿ ಎಂಬವರು ಬೈಕ್‌ನಲ್ಲಿ ತನ್ನ ಪತ್ನಿ ನಮಿತಾ ಅವರನ್ನು ಕುಳ್ಳಿರಿಸಿಕೊಂಡು ಪದವಿನಂಗಡಿಯ ದೇವಸ್ಥಾನಕ್ಕೆ ತೆರಳಿ ಮನೆಗೆ ಮರಳುತ್ತಿದ್ದಾಗ ಕಾರೊಂದು ಅತೀ ವೇಗ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಢಿಕ್ಕಿ ಹೊಡೆದಿದೆ. ಈ ಸಂದರ್ಭ ಬೈಕ್‌ನಲ್ಲಿದ್ದ ರಾಕೇಶ್ ಪೂಜಾರಿ ಮತ್ತವರ ಪತ್ನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಕಾರು ಚಾಲಕ ಆಸ್ಪತ್ರೆಯ ಬಿಲ್ ಪಾವತಿಸುವುದಾಗಿ ಹೇಳಿದರೂ ಬಳಿಕ ಬಿಲ್ ಪಾವತಿಸಲು ನಿರಾಕರಿಸಿದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ.
Next Story





