ಜೂ.16: ಸರ್ವಧರ್ಮ ಇಫ್ತಾರ್ ಕೂಟ
ಉಡುಪಿ, ಜೂ.15: ದುಬೈಯ ಎಚ್‌ಎಂಸಿ ಯುನೈಟೆಡ್ ವತಿಯಿಂದ ಸರ್ವಧರ್ಮ ಇಫ್ತಾರ್ ಕೂಟವನ್ನು ಜು.16ರಂದು ಸಂಜೆ 5 ಗಂಟೆಗೆ ಬರ್ ದುಬೈಯ ಗ್ರಾಂಡ್ ಎಕ್ಸೆಲ್ಸರ್ ಹೊಟೇಲಿನಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಎನ್‌ಆರ್‌ಐ ಫಾರಂನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಹರೀಶ್ ಶೇರಿಗಾರ್, ಯೋಗೇಶ್ ದೇಶ ಪಾಂಡೆ, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಝಫ್ರುಲ್ಲಾ ಖಾನ್, ರೇಡಿಯೋ ಸ್ಪೈಸ್‌ನ ಹರ್ಮನ್ ಲೂಯಿಸ್, ಅಬುಧಾಬಿ ಕರ್ನಾಟಕ ಸಂಘದ ಸವೋತ್ತಮ ಶೆಟ್ಟಿ, ಲೇಖಕ ಗಣೇಶ್ ರೈ ಮೊದಲಾದವರು ಭಾಗವಹಿಸಲಿರುವರು ಎಂದು ಒಕ್ಕೂಟ ಸ್ಥಾಪಕ ಅಧ್ಯಕ್ಷ ಶಕೀಲ್ ಹಸನ್ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





