ಜುಗಾರಿ: ಏಳು ಮಂದಿ ಸೆರೆ
ಗಂಗೊಳ್ಳಿ, ಜೂ.15: ಹೊಸಾಡು ಗ್ರಾಮದ ತಗ್ಗಿನ ಹಿತ್ತಲು ಎಂಬಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಣ್ಗೇರಿಯ ನಾಗರಾಜ(28), ಭರತ್‌ನಗರದ ಸದಾನಂದ ಖಾರ್ವಿ(28), ಕಂಚುಗೋಡಿನ ಶೇಖರ ಪೂಜಾರಿ(29), ಸುಬ್ರಾಯ ಖಾರ್ವಿ(29), ಸತೀಶ ಸತ್ಯ(29), ಗಂಗೊಳ್ಳಿ ಲೈಟ್‌ಹೌಸ್‌ನ ಮಿಥುನ್ ಖಾರ್ವಿ(30), ತ್ರಾಸಿಯ ಮಣಿ ಸುಬ್ರಹ್ಮಣ್ಯ(30) ಎಂಬವರು ಬಂಧಿತ ಆರೋಪಿಗಳು. ಇವರಿಂದ 2,100 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





