ಪ್ರತಿದಿನ 4 ಜಿಬಿ ಇಂಟರ್ನೆಟ್ ಡಾಟಾ: ಬಂಪರ್ ಆಫರ್ ಘೋಷಿಸಿದ ಬಿಎಸ್ಸೆನ್ನೆಲ್
ಹೊಸದಿಲ್ಲಿ, ಜೂ.16: ಜಿಯೋ ಸಿಮ್ ಮಾರುಕಟ್ಟೆಗೆ ಕಾಲಿಟ್ಟ ನಂತರ ಟೆಲಿಕಾಂ ಆಪರೇಟಿಂಗ್ ಸಂಸ್ಥೆಗಳು ಒಂದೊಂದಾಗಿ ಜನಪ್ರಿಯ ಆಫರ್ ಗಳನ್ನು ಘೋಷಿಸುತ್ತಿವೆ. ಇದೀಗ ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ಭಾರೀ ಆಫರ್ ಘೋಷಿಸಿದ್ದು, ಪ್ರಿಪೇಯ್ಡ್ ಬಳಕೆದಾರರು 444 ರೂ. ರಿಚಾರ್ಜ್ ನೊಂದಿಗೆ 90 ದಿನಗಳವರೆಗೆ ಪ್ರತಿದಿನ 4 ಜಿಬಿ ಡಾಟಾ ಸಿಗಲಿದೆ.
ರಿಲಾಯನ್ಸ್ ಜಿಯೋದ ಫ್ರೀ ವಾಯ್ಸ್ ಕಾಲ್ ಹಾಗೂ ಜನಪ್ರಿಯ ಇಂಟರ್ ನೆಟ್ ಆಫರ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿತ್ತು. ಜಿಯೋ ಆಫರ್ ಗಳು ಜನಪ್ರಿಯವಾಗುತ್ತಿದ್ದಂತೆ ಇತರ ಟೆಲಿಕಾಂ ಆಪರೇಟರ್ ಸಂಸ್ಥೆಗಳು ಹೊಸ ಹೊಸ ಯೋಜನೆಗಳನ್ನು ಘೋಷಿಸಿತ್ತು. ಇದೀಗ ಬಿಎಸ್ಸೆನ್ನೆಲ್ ಕೂಡ “ಬಿಎಸ್ಸೆನ್ನೆಲ್ ಚೌಕ-444” ಎನ್ನುವ ವಿನೂತನ ಆಫರ್ ಘೋಷಿಸಿದೆ.
Next Story