ಕೇರಳ: ಮಲಬಾರ್ ನದಿಗಳನ್ನು ಸೇರಿಸಿ 300 ಕೋಟಿ ರೂ. ಬೃಹತ್ ಪ್ರವಾಸೋದ್ಯಮ ಯೋಜನೆ

ತಿರುವನಂತಪುರಂ,ಜೂ. 16: ಮಲಬಾರ್ ನದಿಗಳನ್ನು ಸೇರಿಸಿ 300ಕೋಟಿರೂಪಾಯಿಗಳ ಬೃಹತ್ ಪ್ರವಾಸಿಯೊಜನೆಯನ್ನು ಕೇರಳಸರಕಾರ ಜಾರಿಗೊಳಿಸಲಿದೆ. ಕಣ್ಣೂರ್ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಯೋಜನೆಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದ್ದು ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಿದ್ದರು.
ಮಲಬಾರ್‌ನ ಎಲ್ಲ ನದಿಗಳನ್ನು ಸೇರಿಸಿ 197 ಕಿಲೋಮೀಟರ್ ಉದ್ದದ ಪ್ರವಾಸಿ ಮಾರ್ಗಕ್ಕೆ ಸರಕಾರ ರೂಪು ನೀಡಲಿದೆ. ಈ ದಾರಿಯಲ್ಲಿ ಬೋಟ್ ಸಂಚಾರ ಮತ್ತು ಇಲ್ಲಿನ ಸಂಸ್ಕೃತಿ, ಆಹಾರ ಸಂಸ್ಕೃತಿಗಳನ್ನು ಆಸ್ವಾದಿಸಬಹುದು ಪರಶ್ಶಿನ ಕಡವ್ ಮತ್ತು ಪಯಂಗಾಡಿಯಲ್ಲಿ ಬೋಟ್ ಜೆಟ್ಟಿಗಳನ್ನು ನಿರ್ಮಿಸಲು 15 ಕೋಟಿರೂಪಾಯಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಕೇಂದ್ರಸರಕಾರದ ಸ್ವದೇಶ್ ದರ್ಶನ್ ಯೋಜನೆಯಲ್ಲಿ ಸೇರಿಸಲು ರಾಜ್ಯಸರಕಾರ ಮನವಿ ಮಾಡಲಿದೆ. ಪ್ರದೇಶದಲ್ಲಿ ಹೋಮ್‌ಸ್ಟೇ ಆರಂಭಿಸಲು ಸ್ಥಳೀಯರಿಗೆ ಕಿಟ್ಸ್ ತರಬೇತಿ ನೀಡಲಾಗುತ್ತದೆ. ಮುಯಪ್ಪಿಲಂಗಾಟ್‌ನಲ್ಲಿ ಮೂರುವರೆ ಎಕರೆಯ ಜಮೀನಿನಲ್ಲಿ 43 ಕೋಟಿ ರೂಪಾಯಿ ಖರ್ಚು ಮಾಡಿ ಕೆ.ಟಿ.ಡಿ.ಸಿ ತ್ರಿಸ್ಟಾರ್ ಹೊಟೇಲ್‌ನ್ನು ನಿರ್ಮಿಸಲಿದೆ ಎಂದು ಸಚಿವರು ತಿಳಿಸಿದರು. ಪ್ರವಸೋದ್ಯಮ ಕ್ಷೇತ್ರದಲ್ಲಿ ಎರಡುವರ್ಷಗಳಲ್ಲಿ 80,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರಕಾರದ ಉದ್ದೇಶವಾಗಿದೆ. ಜವಾಬ್ದಾರ ಟೂರಿಸಂ ಎನ್ನುವ ಗುರಿಯೊಂದಿಗೆ ಪ್ರವಾಸೋದ್ಯಮ ನೀತಿಗೆ ರೂಪು ನೀಡಲಾಗುತ್ತಿದೆ. ಶಬರಿಮಲೆ ಮತ್ತು ಪದ್ಮನಾಭಸ್ವಾಮಿ ದೇವಳಕ್ಕಾಗಿ 98 ಕೋಟಿ ರೂಪಾಯಿ ಮತ್ತು ಗುರುವಾಯೂರ್‌ಗೆ 46 ಕೋಟಿ ರೂಪಾಯಿಗಳ ಯೋಜನೆಗೆ ಈಗಾಗಲೇ ಕೇಂದ್ರ ಸಮಿತಿ ಆನುಮತಿ ನೀಡಿದೆ.





