ಚಾಂಪಿಯನ್ಸ್ ಟ್ರೋಫಿ ಫೈನಲ್ ದಾರಿಯಲ್ಲಿ ಪಾಕ್ ಫಿಕ್ಸಿಂಗ್: ಆಮಿರ್ ಸೊಹೈಲ್ ಆರೋಪ
.jpg)
ಹೊಸದಿಲ್ಲಿ, ಜೂ.16: ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ಫಿಕ್ಸಿಂಗ್‌ನ ಕರಿನೆರಳು ಆವರಿಸಿದೆ. ಪಾಕಿಸ್ತಾನ ತಂಡ ಬಾಹ್ಯಶಕ್ತಿಗಳ ಒತ್ತಡದಿಂದಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದೆ ಎಂದು ಮಾಜಿ ನಾಯಕ ಆಮಿರ್ ಸೊಹೈಲ್ ಆರೋಪಿಸಿದ್ದಾರೆ.
ಪಾಕಿಸ್ತಾನದ ನ್ಯೂಸ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘‘ಪಾಕಿಸ್ತಾನ ತಂಡ ಫೈನಲ್ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಬೀಗ ಬೇಕಾಗಿಲ್ಲ. ಯಾಕೆಂದರೆ ಅದು ಫೈನಲ್ ತಲುಪುವುದು ಮೊದಲೇ ನಿಗದಿಯಾಗಿತ್ತು’’ ಎಂದು ಆಮಿರ್ ಹೇಳಿದ್ದಾರೆ.
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ಅನಂತರ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕವನ್ನು ಸೋಲಿಸಿ ಸೆಮಿಫೈನಲ್ ಗೇರಿತ್ತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ತಂಡವನ್ನು ಮಣಿಸಿ ಭಾರತ ಫೈನಲ್ ತಲುಪಿದೆ. ಇದರಿಂದಾಗಿ ಪಾಕಿಸ್ತಾನ ಇದೀಗ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಫೈನಲ್‌ನಲ್ಲಿ ಎದುರಿಸುವಂತಾಗಿದೆ. ಸೊಹೈಲ್ ಆರೋಪವನ್ನು ಅವರೊಂದಿಗೆ ಸ್ಟುಡಿಯೋದಲ್ಲಿದ್ದ ಪಾಕಿಸ್ತಾನದ ಗ್ರೇಟ್ ಜಾವೇದ್ ಮಿಯಂದಾದ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಭಾರತದ ಮಾಜಿ ಕ್ರಿಕೆಟಿಗ ಆತುಲ್ ವಾಸನ್ ಇದೊಂದು ಅಪೂರ್ಣ ಹೇಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ವಿರುದ್ಧದ ಆರೋಪವನ್ನು ಪೂರ್ಣವಾಗಿ ತಿರಸ್ಕರಿಸುವಂತಿಲ್ಲ. ಏಕೆಂದರೆ 2010ರ ಇಂಗ್ಲೆಂಡ್ ಪ್ರವಾಸದಲ್ಲಿ ಪಾಕ್ ಕ್ರಿಕೆಟಿಗರಾದ ಮುಹಮ್ಮದ್ ಆಮಿರ್, ಮುಹಮ್ಮದ್ ಆಸಿಫ್ ಮತ್ತು ಸಲ್ಮಾನ್ ಬಟ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡು ಶಿಕ್ಷೆ ಅನುಭವಿಸಿದ್ದರು





