ಕೇರಳದಲ್ಲಿ ಅಷ್ಟಪದಿ ಆಡಿನ ಮರಿ ಜನನ

ಏಕಕರುಲ್(ಕೇರಳ), ಜೂ. 16: ಒಂದೇ ತಲೆ ಮತ್ತು ಎಂಟು ಕಾಲುಗಳ ಆಡಿನ ಮರಿ ಜನನವಾಗಿದೆ. ಕರಿಯಾತ್ತನ್‌ಕಾವ್ ಎನ್ನುವಲ್ಲಿನ ಪಿ.ಕೆ. ಬಿಜು ಎಂಬವರ ಮನೆಯಲ್ಲಿ ಆಡು ಇಂತಹ ಒಂದು ವಿಚಿತ್ರ ಮರಿಹಾಕಿದೆ. ಎರಡು ವರ್ಷ ವಯಸ್ಸಿನ ಆಡಿನ ಚೊಚ್ಚಲ ಹೆರಿಗೆ ಇದು ಎಂದು ಬಿಜು ತಿಳಿಸಿದ್ದಾರೆ. ಆಡಿನ ಮರಿ ಸತ್ತಿದೆ.
ತಾಯಿ ಆಡಿಗೆ ಯಾವ ತೊಂದರೆಯೂ ಆಗಿಲ್ಲ. ಇದು ಅಪೂರ್ವವಾಗಿ ಕಂಡು ಬರುವ ಅಂಗವೈಕಲ್ಯ ವೆಂದು ಉಣ್ಣಿಕುಳಂ ಜಾನುವಾರು ಆಸ್ಪತ್ರೆಯ ಪಶು ವೈದ್ಯಕೀಯ ಸರ್ಜನ್ ಡಾ. ಸಿ.ಕೆ. ಶಾಜಿಬ್ ಹೇಳಿದರು. ಆಡಿನ ಮರಿಯ ಶವವನ್ನು ತೃಶೂರ್ ಫಶು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
Next Story





