ಕಡಬ: ಚರ್ಚ್ ಗೆ ನುಗ್ಗಿ ಶಿಲುಬೆ ಸಹಿತ ನಗದು ಕಳವು
ಕಡಬ, ಜೂ.16. ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿಗೆ ನುಗ್ಗಿದ ಕಳ್ಳರು ಚಿಲ್ಲರೆ ಹಣದೊಂದಿಗೆ ಶಿಲುಬೆಯನ್ನು ಹೊತ್ತೊಯ್ದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಚರ್ಚಿನ ಶಿಲುಬೆ ಗೋಪುರದ ಬೀಗ ಒಡೆದು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ದೋಚಿದ್ದಾರೆ. ಉಳಿದ ಭಾಗಗಳಲ್ಲಿ ಸಿಸಿ ಕ್ಯಾಮರಾ ಇದ್ದು, ಕಳ್ಳತನ ನಡೆದ ಜಾಗದಲ್ಲಿನ ಸಿಸಿ ಕ್ಯಾಮರಾ ದುರಸ್ಥಿಯಲ್ಲಿತ್ತು. ಈ ಬಗ್ಗೆ ಮಾಹಿತಿ ಅರಿತ ವ್ಯಕ್ತಿಯೇ ಕೃತ್ಯ ಮಾಡಿರಬಹುದೆಂದು ಶಂಕಿಸಲಾಗಿದೆ.
ಹುಂಡಿಯಲ್ಲಿನ ಹಣವನ್ನು ರವಿವಾರ ಖಾಲಿ ಮಾಡಲಾಗಿದ್ದು, ಆದುದರಿಂದ ಹೆಚ್ಚಿನ ಹಣವೇನೂ ಕಳ್ಳರ ಪಾಲಾಗಿಲ್ಲ ಎಂದು ಚರ್ಚ್ ಮೂಲಗಳು ತಿಳಿಸಿವೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡಯುತ್ತಿದೆ.
Next Story





