ಮರ ಆಧಾರಿತ ಕೃಷಿ ಅನುಸರಿಸಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಿ: ದಯಾನಂದ್
ಹನೂರು,ಜೂ.16: ಅರಣ್ಯ ಹಕ್ಕು ಕಾಯ್ದೆಯಡಿ ಸೋಲಿಗರಿಗೆ ನೀಡಿರುವ ಜಮೀನುಗಳಲ್ಲಿ ಎಕರೆಗೆ ಕನಿಷ್ಠ 40 ಗಿಡಗಳನ್ನು ನೆಟ್ಟು ಬೆಲೆಸುವುದರ ಮೂಲಕ ಮರ ಆಧಾರಿತ ಕೃಷಿ ಅನುಸರಿಸಿ ಅರನ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕೆಂದು ವಲಯ ಅರಣ್ಯಾಧಿಕಾರಿ ದಯಾನಂದ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಒಡೆಯರಪಾಳ್ಯ ಸಮೀಪದ ಗುಳ್ಳದಬೈಲು ಗ್ರಾಮದಲ್ಲಿರುವ ಆದಿವಾಸಿ ಸಮುದಾಯ ಕಲಿಕೆ/ ತರಬೇತಿ ಮತ್ತು ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ದಯಾನಂದ್ ಸಸಿಗಳನ್ನು ನೆಡುವುದರಿಂದ ಪರಿಸ ರಕ್ಷಣೆ ಹಾಗೂ ಆರ್ಥಿಕವಾಗಿ ಸಹಾಯ ದೊರೆಯುವುದೆಂದು ತಿಳಿಸಿದರು. ಹಾಗೂ ಉದ್ಯೋಗಖಾತ್ರಿಯಡಿ ಕೆಲಸನಿರ್ವಹಿಸಲು ಇಚ್ಛಿಸಿದಲ್ಲಿ ಇಲಾಖೆ ಮೂಲಕ ಸೋಲಿಗರಿಗೆ ಉದ್ಯೋಗ ನೀಡಿ 100 ದಿನಗಳ ಕೂಲಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮುತ್ತಯ್ಯ.ವಿ ಮಾತನಾಡಿ ಆದಿವಾಸಿ ಸಮುದಾಯ ಕಲಿಕೆ/ ತರಬೇತಿ ಮತ್ತು ಸಂಪನ್ಮೂಲ ಕೇಂದ್ರದ ಮೂಲಕ ಈ ವ್ಯಾಪ್ತಿಯಜನರ ಸಂಘಟನೆ(ಒಗ್ಗಟ್ಟು) ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಹಿತಿಶಿಕ್ಷಣ, ಸಂವಹನ / ಸಂಪರ್ಕ ವಿವಿಧ ವಿಷಯಗಳಲ್ಲಿ ಸಂವಾದ/ ಚರ್ಚೆ, ವಿಚಾರ ವಿನಿಮಯ ವ್ಯಕ್ತಿ ವಿಕಾಸ ಕೌಶಲ್ಯವರ್ಧನೆ, ಜೀವನಾಧಾರ ಚಟುವಟಿಕೆಗಳ ಮೂಲಕ ಸುಸ್ಥಿರ ಬದುಕಿನ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.
ಆದಿವಾಸಿ ಸಂಸ್ಕೃತಿ, ಆಸ್ಮಿತೆ ಅಸ್ತಿತ್ವ ಹಾಗೂ ಅನನ್ಯತೆ, ಸರಳಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು.ಮಕ್ಕಳ ಹಕ್ಕು ಮತ್ತು ಶಿಕ್ಷಣ, ಕೃಷಿ, ಮಹಿಳಾಜಾಗೃತಿ ಮೂಡಿಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ನಿರ್ಧರಿಸಲಾಗಿದೆ. ಸಂಪನ್ಮೂಲ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಾಲ್ಲೂಕಿನ 10 ಆಶ್ರಮಶಾಲೆಗಳಿರುವ ಪೋಡುಗಳಲ್ಲಿ ಮಕ್ಕಳ ಹಕ್ಕು ಹಾಗೂ ಶಿಕ್ಷಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸೋಲಿಗ ಅಭಿವೃದ್ದಿ ಸಂಘದ ಗೌರವಅಧ್ಯಕ್ಷರಾದ ಶ್ರೀ.ಕುಮಾದನ್, ಮಾಜಿಅದ್ಯಕ್ಷರಾದ ಬಿಳಿಗಿರಿಗೌಡ, ಸಿದ್ದೇಗೌಡ, ಕೇತೇಗೌಡಕೊಲ್ಲನ ಮಾದೇಗೌಡ, ಜುಟ್ಟುಮಾದ, ಅಣ್ಣಾದೊರೆ,ದಾಸೇಗೌಡ, ತಿರಮಮ್ಮ, ಪುಟ್ಟಮಾದಮ್ಮ, ಗ್ರಾಮಪಂಚಾಯತ್ ಸದಸ್ಯರಾದ ಮಣಿ, ಹುಚ್ಚಯ್ಯ, ತಮ್ಮಡಿಈರಯ್ಯ, ಮಂಜುನಾಥ, ರಂಗೇಗೌಡ, ಮಹದೇವಸ್ವಾಮಿ ಇನ್ನಿತರರು ಹಾಜರಿದ್ದರು.







