ನಾಪತ್ತೆ
ಕಾಪು, ಜೂ.17: ಕಟಪಾಡಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಶಂಕರಪುರ ಮೂಡುಬೆಟ್ಟು ಗ್ರಾಮದ ಮನೆಯಲ್ಲಿ ವಾಸವಾಗಿದ್ದ ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಗುಂಜಾವತಿ ಗ್ರಾಮದ ಬಾಪು ಸಗ್ಗು ಲಾಂಬೋರೆ(21) ಎಂಬವರು ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಬಿಳಿ ಮೈಬಣ್ಣ, ತುಳು, ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುವ ಇವರ ಬಲ, ಎಡಗೈಯಲ್ಲಿ ದೇವರ ಹಚ್ಚೆ, ಬಲ ಕಾಲಿನ ಮೊಣಗಂಟಿನ ಕೆಳಗೆ ಹಳೆಯ ಗಾಯದ ಗುರುತು ಇದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2551033, 9480805449, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ 0820-2520333, 9480805431ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





