ಅಂಗಡಿಗೆ ನುಗ್ಗಿ ಮೊಬೈಲ್ ಕಳವು
ಶಿರ್ವ, ಜೂ.16: ಮೂಡುಬೆಳ್ಳೆ ಅನನ್ಯ ಸೆಲ್ಪ್ಕೇರ್ ಮೊಬೈಲ್ ಅಂಗಡಿಗೆ ಜೂ.14ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಗಡಿಯ ಕಿಟಕಿಯ ಬಾಗಿಲಿಗೆ ಆಳವಡಿಸಿದ ಗ್ಲಾಸ್‌ನ್ನು ಒಡೆದು ಕಿಟಕಿ ಒಳಗಿನಿಂದ ಕೈ ಹಾಕಿ ಅಂಗಡಿಯ ಸೆಲ್ಪ್ನಲ್ಲಿದ್ದ ವಿವಿಧ ಕಂಪೆನಿಯ 6 ಮೊಬೈಲ್ಗಳನ್ನು ಕಳವು ಮಾಡಲಾಗಿದೆ. ಇವುಗಳ ಒಟ್ಟ ವೌಲ್ಯ 25,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





