ಯುವಕ ನಾಪತ್ತೆ: ದೂರು

ಉಪ್ಪಿನಂಗಡಿ,ಜೂ.16: ಅಟೋ ರಿಕ್ಷಾದಲ್ಲಿ ಬಾಡಿಗೆ ಮಾಡಲು ಹೋದ ಯುವಕನೋರ್ವ ಜೂ.15ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂಜಿಬಾಳ್ತಿಲ ಬಳಿಯ ರೆಂಜಲಾಡಿ ಗ್ರಾಮದ ಪೆಲತ್ರಾಣಿ ನಿವಾಸಿ ಅಬ್ಬಾಸ್ ಎಂಬವರ ಮಗ ಆದಂ ಯಾನೆ ಸಾದು (21) ನಾಪತ್ತೆಯಾದ ಯುವಕ.
ಬೆಳಗ್ಗೆ ಸುಮಾರು 7ಗಂಟೆಗೆ ಅಟೋ ರಿಕ್ಷಾದೊಂದಿಗೆ ಬಾಡಿಗೆ ನಡೆಸಲು ತೆರಳಿದ ಈತ ಬಳಿಕ ತನ್ನ ಸ್ನೇಹಿತ ರೆಂಜಲಾಡಿ ನಿವಾಸಿ ಧನಂಜಯ ಎಂಬವರಲ್ಲಿಗೆ ಬಂದು ತನ್ನನ್ನು ಕೌಕ್ರಾಡಿ ಗ್ರಾಮದ ಪೆರಿಯಶಾಂತಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಬಿಡು ಎಂದಿದ್ದ. ಅದರಂತೆ ಧನಂಜಯರವರು ಈತನನ್ನು ಮಧ್ಯಾಹ್ನ ಪೆರಿಯಶಾಂತಿಗೆ ಬಿಟ್ಟಿದ್ದು, ಪೆರಿಯ ಶಾಂತಿಯಲ್ಲಿ ರಿಕ್ಷಾದಿಂದ ಇಳಿದ ಈತ ನೀನು ರಿಕ್ಷಾವನ್ನು ಪೆಟ್ರೋಲ್ ಪಂಪ್‌ನಲ್ಲಿ ಇಡು. ನನ್ನನ್ನು ಕರೆದುಕೊಂಡು ಹೋಗಲು ಕಾರು ಬರುತ್ತದೆ ಎಂಬುದಾಗಿ ತಿಳಿಸಿ ಹೋದಾತ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ ಎಂದು ಹೇಳಿ ಆದಂನ ತಂದೆ ಅಬ್ಬಾಸ್ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





