ಕಾರಿನಲ್ಲಿ ದನ ಪತ್ತೆ: ಪೊಲೀಸರ ವಶ
ಮಂಗಳೂರು, ಜೂ. 16: ಕಾರಿನಲ್ಲಿ ದನವೊಂದು ಪತ್ತೆಯಾಗಿರುವ ಘಟನೆ ಅರ್ಕುಳ ಚೆಕ್‌ಪೋಸ್ಟ್ ಬಳಿ ನಡೆದಿದೆ. ಕಾರಿನಲ್ಲಿದ್ದ ಮೂವರು ಈ ಸಂದರ್ಭ ಪರಾರಿಯಾಗಿದ್ದಾರೆ.
ಗ್ರಾಮಾಂತರ ಠಾಣಾ ಪಿ.ಎಸ್.ಐ ವೆಂಕಟೇಶ್ ಅವರು ಇಂದು ಬೆಳಗ್ಗೆ 4 ಗಂಟೆಗೆ ಅರ್ಕುಳ ತಲುಪಿ ಅಲ್ಲಿ ಚೆಕ್‌ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಜೊತೆಗೆ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಫರಂಗಿಪೇಟೆಯಿಂದ ವೇಗವಾಗಿ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಸದ್ರಿ ಕಾರು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದು, ಪೊಲೀಸರು ತಪಾಸಣೆಗಾಗಿ ಹತ್ತಿರ ಹೋದಾಗ ಮೂವರು ಕಾರಿನಿಂದಿಳಿದ್ದು ಪರಾರಿಯಾಗಿದ್ದಾರೆ.
ಈ ಸಂದರ್ಭ ಕಾರಿನಲ್ಲಿ ಒಂದು ದನ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜ್ಪೆ ಶಾಂತಿಗುಡ್ಡೆಯ ನಿವಾಸಿ ಮುಹಮ್ಮದ್ ಮುಸ್ತಫಾ ಎಂಬವರಿಗೆ ಈ ಕಾರು ಸೇರಿದ್ದಾಗಿದೆ.
ಪೊಲೀಸರು ಜಾನುವಾರು ಸಹಿತ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





