Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಭಾಷೆಯ ಮೂಲಕವೇ ಕಟ್ಟಿಕೊಡುವ ತಳಸ್ತರದ...

ಭಾಷೆಯ ಮೂಲಕವೇ ಕಟ್ಟಿಕೊಡುವ ತಳಸ್ತರದ ಬದುಕು

​ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ16 Jun 2017 11:41 PM IST
share
ಭಾಷೆಯ ಮೂಲಕವೇ ಕಟ್ಟಿಕೊಡುವ ತಳಸ್ತರದ ಬದುಕು

ದಿಲೀಪ್ ಎನ್‌ಕೆ ಅವರ ‘ಬಲಿಷ್ಠ’ ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಯೋಗ ರೂಪವಾಗಿದೆ. ಈ ಹಿಂದೆ ಹಿರಿಯ ಕತೆಗಾರರಾದ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ ಬರೆದಾಗ ಕನ್ನಡ ಸಾಹಿತ್ಯದ ದಿಗ್ಗಜರೇ ಹಲವು ಗೊಂದಲಗಳ ಜೊತೆಗೆ ಅದನ್ನು ಸ್ವೀಕರಿಸಿದ್ದರು. ಇದನ್ನು ಕನ್ನಡ ಕಾವ್ಯವೆಂದು ಕರೆಯಬೇಕೇ? ಕನ್ನಡದ ಈ ಭಾಷೆಯನ್ನು ಯಾವ ನೆಲೆಯಲ್ಲಿ ಸ್ವೀಕರಿಸಬೇಕು ಎಂಬುದರ ಕುರಿತಂತೆ ಸಾಹಿತ್ಯ ವಿಮರ್ಶಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಚಂದ್ರಶೇಖರ ಪಾಟೀಲರಂತೂ ‘ಕುಸುಮಬಾಲೆ’ ಕನ್ನಡಕ್ಕೆ ಅನುವಾದ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅದೇನೇ ಇರಲಿ, ತಳಸ್ತರದ ಬೀಜರೂಪದ ಭಾಷೆಯನ್ನು ಕನ್ನಡ ಸಾಹಿತ್ಯದ ಮುಖ್ಯವಾಹಿನಿಗೆ ತಂದು ನಿಲ್ಲಿಸುವ ಮೂಲಕವೇ ದೇವನೂರ ಮಹಾದೇವ ಇಂದು ವಿಭಿನ್ನವಾಗಿ ನಿಲ್ಲುತ್ತಾರೆ. ದೇವನೂರ ಮಹಾದೇವರ ಭಾಷೆಯ ದಟ್ಟ ಪ್ರಭಾವದೊಂದಿಗೆ ದಿಲೀಪ್ ಎನ್ಕೆ ಅವರು ತಮ್ಮ ಕತೆಗಳನ್ನು ಬರೆದಿದ್ದಾರೆ. ರಂಜಾನ್ ದರ್ಗಾ ಅವರು ಹೇಳುವಂತೆ, ಒಂದು ಸಮುದಾಯದ ಭಾಷೆಯನ್ನು ಅರಿಯದೇ ಆ ಜನರ ನೋವಿನ ಮೂಲವನ್ನು ಅರ್ಥೈಸಿಕೊಳ್ಳಲಿಕ್ಕಾಗದು. ಶಿಷ್ಟರು ಪರಿಶಿಷ್ಟರ ಭಾಷಾ ಪ್ರಭೇದದ ಮೂಲಕವೇ ಅವರನ್ನು ಅರ್ಥೈಸಿಕೊಳ್ಳಬೇಕು. ಆ ಭಾಷೆಯನ್ನು ಕಳಚಿಬಿಟ್ಟರೆ ಅವರ ಬದುಕಿನ ಸೂಕ್ಷ್ಮತೆಯನ್ನು ಹಿಡಿದಿಡಲಿಕ್ಕಾಗುವುದಿಲ್ಲ ಎಂಬ ಕಾಳಜಿಯನ್ನು ದಿಲೀಪ ಹೊಂದಿದ್ದಾರೆ.

‘ಬಲಿಷ್ಠ’ ಕಥಾಸಂಕಲನದಲ್ಲಿ ಒಟ್ಟು ಏಳು ಕತೆಗಳಿವೆ. ಎಲ್ಲ ಕತೆಗಳೂ ತಳಸ್ತರ ಜಾತಿ ವ್ಯವಸ್ಥೆ ಮತ್ತು ಬವಣೆಗಳನ್ನು ತೆರೆದಿಡುವಲ್ಲಿ ಆಸಕ್ತಿಯನ್ನು ವಹಿಸುತ್ತವೆ. ‘ಎಳೆ ಇಲ್ಲದೆ ಎಳೆದದ್ದು’ ತೇರು ಎಳೆಯುವ ಘಟನೆಯನ್ನು ಇಟ್ಟುಕೊಂಡು ಸಾಮಾಜಿಕ ಪ್ರತಿಷ್ಠೆಯನ್ನು ಪ್ರಶ್ನಿಸುತ್ತಾರೆ. ‘ಕೊರಳೊಡ್ಡುವ ಮುನ್ನ’ ಜಾತಿ ತಾಕಲಾಟಗಳ ನಡುವೆಯೇ ಹೆಣ್ಣೊಬ್ಬಳ ತುಮುಲವನ್ನು ಕಟ್ಟಿಕೊಡುತ್ತದೆ. ‘ಬಾಳ ಸಿವುರು’ ಯುವಕನೊಬ್ಬನ ತುಮುಲಗಳನ್ನು ಕಟ್ಟಿಕೊಡುತ್ತದೆ. ‘ಗವ್ಗತ್ಲು’ ಹೆಣವೊಂದನ್ನು ಮುಂದಿಟ್ಟುಕೊಂಡು ತಳಸ್ತರದ ಬದುಕಿನ ತಳಮಳಗಳನ್ನು ಕಟ್ಟಿಕೊಡುತ್ತದೆ. ‘ಕಸಿ’ ಮರ್ಯಾದೆ ರಹಿತ ಹತ್ಯೆಯ ಕ್ರೌರ್ಯವನ್ನು ತೆರೆದಿಡುವಂಥದ್ದು.

ಇಲ್ಲಿರುವ ಕತೆಗಳ ಪಾತ್ರಗಳನ್ನು, ಬದುಕನ್ನು ನಾವು ತಲುಪಬೇಕಾದರೆ ಭಾಷೆಯ ನುಡಿಗಟ್ಟುಗಳನ್ನು ಒಡೆಯುವುದಕ್ಕೆ ಗೊತ್ತಿರಬೇಕು. ಭಾಷೆ ಮತ್ತು ಬದುಕು ಒಂದನ್ನೊಂದು ಬಿಡದೇ ಬೆಸೆದಿರುವ ಕಾರಣ ದಿಂದಲೇ ಇಲ್ಲಿ ಭಾಷೆಯ ಗೆಲುವೂ ಹೌದು. ಅನೇಕ ಸಂದರ್ಭದಲ್ಲಿ ತೊಡಕೂ ಹೌದು. ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಮುಖಬೆಲೆ 60 ರೂಪಾಯಿ. ಆಸಕ್ತರು 94483 50923 ದೂರವಾಣಿಯನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X