2032ರ ಒಲಿಂಪಿಕ್ಸ್‌ಗೆ ಭಾರತ ಬಿಡ್ ಸಾಧ್ಯತೆ: ರಾಮಚಂದ್ರನ್

ಚೆನ್ನೈ,ಜೂ.16: 2032ರ ಒಲಿಂಪಿಕ್ಸ್‌ನ ಆತಿಥ್ಯದ ಹಕ್ಕನ್ನು ಪಡೆಯಲು ಭಾರತ ಬಿಡ್ ಸಲ್ಲಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಎನ್.ರಾಮಚಂದ್ರನ್ ಹೇಳಿದ್ದಾರೆ.
ತಮಿಳುನಾಡು ಒಲಿಂಪಿಕ್ಸ್ ಸಂಸ್ಥೆ(ಟಿಎನ್‌ಒಎ) ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರನ್,‘‘ 2032ರ ಒಲಿಂಪಿಕ್ಸ್‌ಗೆ ಬಿಡ್ಡಿಂಗ್ ಸಾಧ್ಯತೆಯ ಬಗ್ಗೆ ಗಮನ ಹರಿಸಲು ಸರಕಾರ ಒಪ್ಪಿಕೊಂಡಿದೆ. ಇದು ಪ್ರಾಥಮಿಕ ಹಂತದಲ್ಲಿದೆ. ನಮಗೆ ಎಲ್ಲರ ಒಪ್ಪಿಗೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
‘‘ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಭಾರತಕ್ಕೆ ಪ್ರಸ್ತಾವ ನೀಡಿದ್ದು,ಸರಕಾರ ಇದನ್ನು ಒಪ್ಪಿಕೊಂಡಿದೆ. ಇದಕ್ಕೆ ಸರಕಾರ ಮಾತ್ರವಲ್ಲ ವಿರೋಧ ಪಕ್ಷದ ನಾಯಕರಿಂದಲೂ ಒಪ್ಪಿಗೆಯ ಅಗತ್ಯವಿದೆ’’ ಎಂದು ರಾಮಚಂದ್ರನ್ ವಿವರಿಸಿದ್ದಾರೆ.
Next Story





