ರೊಝಾರಿಯೊದಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ

ಮಂಗಳೂರು, ಜೂ.17: ರೊಝಾರಿಯೊ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ರೊಝಾರಿಯೊ ಸಭಾಭವನದಲ್ಲಿ ಶನಿವಾರ ನಡೆಯಿತು.
ರಾಜ್ಯಪಾಲರಾದ ಪ್ರೌಢಶಾಲಾ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿಯಾಗಿ ಪ್ರಜ್ವಲ್ ಎನ್.ಡಿ., ಉಪ ಮುಖ್ಯಮಂತ್ರಿಯಾಗಿ ಕೌಶಿಕ್, ವಾಚಸ್ಪತಿ, ಪ್ರಿತೇಶ್, ವಿರೋಧ ಪಕ್ಷದ ನಾಯಕನಾಗಿ ಶೈಲೇಶ್ ಬಿ. ಹಾಗೂ ಇತರ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಮಂತ್ರಿಗಳ ಪರಿಚಯ, ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಶಿಕ್ಷಕಿ ಲವಿನಾ ಡಿಸೋಜ ಮಂಡಿಸಿದರು. ಶಿಕ್ಷಕಿ ಮೆಟಿಲ್ಡಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಾರಿಯಪ್ಪ ರೈ ಉಪಸ್ಥಿತರಿದ್ದರು.
Next Story





