ಭೂ ರಹಿತರು ಮತ್ತು ವಸತಿ ವಂಚಿತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ, ಜೂ. 17: ರಾಜ್ಯದಲ್ಲಿರುವ ಭೂ ರಹಿತರು ಮತ್ತು ವಸತಿ ವಂಚಿತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಶನಿವಾರ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಸರಕಾರದ ಜನಪ್ರಿಯ ಘೋಷಣೆಗಳನ್ನು ಮಾಡುವುದನ್ನು ಬಿಟ್ಟರೆ ಯಾವೊಂದನ್ನೂ ಅನುಷ್ಠಾನಕ್ಕೆ ತಂದಿಲ್ಲ. ಶ್ರೀಮಂತರ ಭೂ ಅತಿಕ್ರಮಣ ತೆರವುಗೊಳಿಸಿಲ್ಲ. ಬಡವರಿಗೆ, ಆದಿವಾಸಿಗಳಿಗೆ ಮತ್ತು ಅಲೆಮಾರಿಗಳಿಗೆ ಭೂಮಿಯನ್ನು ನೀಡುತ್ತಿಲ್ಲ. ಶೋಷಿತ ಸಮುದಾಯಗಳಿರುವ ಜಾಗವನ್ನು ಪರ್ಯಾಯ ವ್ಯವಸ್ಥೆ ಮಾಡದೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಬಡ ಜನರನ್ನು ಪೀಡಿಸಿ ಭೂಮಿ - ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಪ್ರತಿಭಟನಬೀದಿಪಾಲು ಮಾಡುತ್ತಿರುವ ಆಡಳಿತ ವ್ಯವಸ್ಥೆಯು, ಸುಳ್ಳು ಕೇಸು ಹಾಕುತ್ತಿದ್ದಾರೆ. ನ್ಯಾಯ ಕಲ್ಪಿಸಲು ಮುಂದಾಗುತ್ತಿಲ್ಲ. ಇದರಿಂದ ಅದೆಷ್ಟು ಕುಟುಂಬಗಳು ಬೀದಿಪಾಲಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಈಗಾಗಲೇ ಈ ಸಂಬಂಧ ಸಮಿತಿಯು ಎರಡು ಸುತ್ತಿನ ಹೋರಾಟ ನಡೆಸಿದೆ. ಕಂದಾಯ ಸಚಿವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದೆ. ಆದರೂ ಭೂಮಿ ಮತ್ತು ವಸತಿ ಈ ಜನರಿಗೆ ನ್ಯಾಯ ದೊರಕುವ ಕೆಲಸವಾಗಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸತತ ಮೂರು ದಿನದಿಂದ ಸಮಿತಿಯವರು ಹೋರಾಟ ನಡೆಸುತ್ತಿದ್ದಾರೆ. ನಿರ್ಣಾಯಕ ಫಲಿತಾಂಶ ಬರುವವರೆಗೆ ಊರಿಗೆ ಮರಳದಿರಲು ತೀರ್ಮಾನಿಸಿದ್ದಾರೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಸಂವಿಧಾನದತ್ತ ಹಕ್ಕನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಮಿತಿಯ ಪದಾದಿಕಾರಿಗಳಾಗ ಕೆ. ಪಿ. ಶ್ರೀಪಾಲ್, ಕೆ. ಎಲ್. ಅಶೋಕ್, ಟಿ. ಎಚ್. ಹಾಲೇಶಪ್ಪ, ರವಿ ಹರಿಗೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.







