ಮಂಜೇಶ್ವರ: ಕೂಲಿ ಕಾರ್ಮಿಕ ನಾಪತ್ತೆ
ಮಂಜೇಶ್ವರ,ಜೂ.17: ಕೊರೆಕ್ಕಾನ ನಿವಾಸಿ ಕೃಷ್ಣ ನಾಯ್ಕ (41) ಎಂಬವರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೂಲಿ ಕಾರ್ಮಿಕರಾದ ಇವರು ಜೂ. 14ರಂದು ಅಪರಾಹ್ನ 2.30ರ ವೇಳೆ ಮನೆಯಿಂದ ತೆರಳಿದವರು ಮರಳಿ ಬರಲಿಲ್ಲ ಎಂದು ದೂರಲಾಗಿದೆ.
ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ.. ಈ ಬಗ್ಗೆ ಪತ್ನಿ ಕಾವೇರಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story