ಹೆಬ್ರಿಯ ರೇಖಾ ಶೆಟ್ಟಿಗೆ ಸನ್ಮಾನ

ಹೆಬ್ರಿ, ಜೂ.17: ಹೆಬ್ರಿ-ಅಜೆಕಾರು ವಲಯದ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸ್ಕಾರ್ಪ್ ತಯಾರಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ತಂಡದ ಸದಸ್ಯೆ ಹೆಬ್ರಿ ಹೊಸೂರಿನ ರೇಖಾ ಬಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೇಖಾ ಬಿ.ಶೆಟ್ಟಿ, ಮಕ್ಕಳು, ಮಹಿಳೆಯರು, ಮನೆಮಂದಿ ನಿರಂತರವಾಗಿ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿ ಕೊಂಡರೆ ನಾವು ಸಕ್ರಿಯವಾಗುವುದರೊಂದಿಗೆ ಆರೋಗ್ಯವಂತರಾಗಲು ಸಾಧ್ಯ. ಪ್ರತಿಯೊಬ್ಬ ಮಹಿಳೆಯು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಾಧಕಿ ರೇಖಾ ಶೆಟ್ಟಿ ಹಾಗೂ ಬೋಜ ಶೆಟ್ಟಿ ದಂಪತಿಯನ್ನು ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಂಟರ ಮಾತೃಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠಲ ಶೆಟ್ಟಿ, ಬೇಳಂಜೆ ರಮಾನಂದ ಹೆಗ್ಡೆ, ವಾದಿ ರಾಜ ಶೆಟ್ಟಿ, ಮಹಿಳಾ ಬಂಟ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ ಇದ್ದರು.
Next Story