ಜೂ.18: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿ, ಕೊಲ್ಲೂರಿಗೆ ಭೇಟಿ
ಬೆಂಗಳೂರು, ಜೂ.17: ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜೂ.18ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಐಎಎಫ್ ವಿಮಾನದಲ್ಲಿ ಆಗಮಿಸಲಿದ್ದಾರೆ. ಅಲ್ಲಿಂದ ಐಎಎಫ್ ಹೆಲಿಕಾಪ್ಟರ್ ಮುಖಾಂತರ ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ 11.25ಕ್ಕೆ ಇಳಿದು ಬನ್ನಂಜೆ ಸರಕಾರಿ ಪ್ರವಾಸಿ ಮಂದಿರಕ್ಕೆ ಬರಲಿದ್ದಾರೆ.
ಅಪರಾಹ್ನ 12ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ಕೃಷ್ಣದರ್ಶನ ಮಾಡಲಿದ್ದು, 12.45ಕ್ಕೆ ರಾಜಾಂಗಣದಲ್ಲಿ ಬಿಆರ್‌ಎಸ್ ಹೆಲ್ತ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಮಧ್ಯಾಹ್ನ 1.30ಕ್ಕೆ ರಾಜಾಂಗಣದಿಂದ ಹೊರಟು 1.40ಕ್ಕೆ ಸರಕಾರಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು.
ಮಧ್ಯಾಹ್ನ 2.25ಗಂಟೆಗೆ ಉಡುಪಿ ಪ್ರವಾಸಿ ಮಂದಿರದಿಂದ ಹೊರಟು 3.40ಕ್ಕೆ ಕೊಲ್ಲೂರು ತಲುಪುವರು. 3.40ರಿಂದ 4.10ರ ವರೆಗೆ ಕೊಲ್ಲೂರು ಮೂಕಾಂಬಿಕೆ ದರ್ಶನ, 4.10ಕ್ಕೆ ಕೊಲ್ಲೂರಿನಿಂದ ಹೊರಟು 5.25ಕ್ಕೆ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುವರು. 5.30ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.