“ನಾವು ಅಧಿಕಾರಕ್ಕೆ ಬಂದ ನಂತರ ನಿಮ್ಮ ಕೃತ್ಯಗಳಿಗೆ ಬೆಲೆ ತೆರಬೇಕಾದೀತು”’
ಜಿಲ್ಲಾಧಿಕಾರಿ, ಪೊಲೀಸರಿಗೆ ಬೆದರಿಕೆ ಹಾಕಿದ ಅಕಾಲಿ ದಳ ಮಾಜಿ ಶಾಸಕ

ಪಂಜಾಬ್, ಜೂ.17: ತನ್ನ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಿರೋಮಣಿ ಅಕಾಲಿದಳ ಮಾಜಿ ಶಾಸಕ ವಿರ್ಸಾ ಸಿಂಗ್ ಜಿಲ್ಲಾಧಿಕಾರಿಗೆ ಸಾರ್ವಜನಿಕವಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಕಾಲಿದಳ ಕಾರ್ಯಕರ್ತರಿಂದ ಧರಣಿಯಲ್ಲಿ ಮಾತನಾಡಿದ ಅವರು, ತರ್ಣ್ ತರಣ್ ಜಿಲ್ಲಾಧಿಕಾರಿಯವರು ಯಾವುದೇ ಪ್ರಮಾದವೆಸಗಿದಲ್ಲಿ ನಾವು ಅವರನ್ನು ಕ್ಷಮಿಸುವುದಿಲ್ಲ” ಎಂದರು.
ಕಾಂಗ್ರೆಸ್ ನಾಯಕರ ಮಾತುಗಳನ್ನು ಕೇಳಿ ಪೊಲೀಸರು ಕೂಡ ಅಕಾಲಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಇವೆಲ್ಲದಕ್ಕೂ ಶಿರೋಮಣಿ ಅಕಾಲಿ ದಳ ಅಧಿಕಾರಕ್ಕೆ ಬಂದ ನಂತರ ನೀವೆಲ್ಲರೂ ಬೆಲೆ ತೆರಬೇಕಾದೀತು. ಆಗ ನಿಮ್ಮ ಹಿಂದೆ ಯಾವ ಕಾಂಗ್ರೆಸ್ ನಾಯಕರೂ ಇರುವುದಿಲ್ಲ ಎಂದವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಬೆದರಿಕೆ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ, ಈ ಬಗ್ಗೆ ವಿರ್ಸಾ ಸಿಂಗ್ ರನ್ನು ಪ್ರಶ್ನಿಸಿದಾಗ, “ನಾನು ಸತ್ಯವನ್ನೇ ಹೇಳಿದ್ದೇನೆ. ಆಡಳಿತವು ಅಕಾಲಿ ಕಾರ್ಯಕರ್ತರ ವಿರುದ್ಧವಾಗಿ ವರ್ತಿಸುತ್ತಿದೆ” ಎಂದರು.





