ಕಾಸರಗೋಡು:ಕಾರ್ಮಿಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
.jpg)
ಕಾಸರಗೋಡು,ಜೂ.17: ಕಾರ್ಮಿಕನೋರ್ವನ ಮೃತದೇಹ ವಾಸಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ನಾಯಮ್ಮರ ಮೂಲೆಯಲ್ಲಿ ನಡೆದಿದೆ.
ತ್ರಿಶೂರು ವಡಕ್ಕಂಚೇರಿಯ ಸಣ್ಣಿ ಥೋಮಸ್ ( 48) ಮೃತಪಟ್ಟವರು.
ಕಳೆದ ಕೆಲ ವರ್ಷಗಳಿಂದ ನಾಯಮ್ಮರ ಮೂಲೆಯಲ್ಲಿ ವಾಸವಿದ್ದು , ಟೈಲ್ಸ್ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ದುರ್ವಾಸನೆ ಕಂಡು ಬಂದುದರಿಂದ ಸಮೀಪದ ಕ್ವಾಟರ್ಸ್ ನಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದರು.
ವಿದ್ಯಾನಗರ ಠಾಣಾ ಪೊಲೀಸರು ತಲುಪಿದ್ದು , ಒಳಗಿನಿಂದ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಕೊನೆಗೆ ಬಾಗಿಲು ಮುರಿದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.
Next Story





