ಟರ್ಕ್‌ಮೆನಿಸ್ತಾನ್: ರಮಝಾನ್‌ನಲ್ಲಿ 1029 ಕೈದಿಗಳಿಗೆ ಕ್ಷಮಾದಾನ್

ಅಸ್ಘಾಬಾತ್ (ಟರ್ಕ್‌ಮೆನಿಸ್ತಾನ್), ಜೂ.17: ಪವಿತ್ರ ರಮಝಾನ್ ಮಾಸಾಚರಣೆಯ ಹಿನ್ನೆಲೆಯಲ್ಲಿ ಟರ್ಕ್‌ಮೆನಿಸ್ತಾನವು ದೇಶದ ವಿವಿಧ ಜೈಲುಗಳಲ್ಲಿರುವ 1 ಸಾವಿರಕ್ಕೂ ಅಧಿಕ ಕೈದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದೆ.
ಟರ್ಕ್‌ಮೆನಿಸ್ತಾನದ ಅಧ್ಯಕ್ಷ ಗುರ್ಬಾಂಗುಲಿ ಬೆರ್ಡಿಮುಖಾಮೆಡೊವ್ ಅವರು ದೇಶದ 1029 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಆದೇಶಕ್ಕೆ ಸಹಿಹಾಕಿದ್ದಾರೆಂದು ‘ನ್ಯೂಟ್ರಲ್ ಟರ್ಕ್‌ಮೆನಿಸ್ತಾನ್’ ದಿನಪತ್ರಿಕೆ ಶನಿವಾರ ವರದಿ ಮಾಡಿದೆ.
ಕ್ಷಮಾದಾನ ಪಡೆದವರು ದೇಶದಲ್ಲಿ ನಡೆಯುತ್ತಿರುವ ಬೃಹತ್ ಮಟ್ಟದ ಅಭಿವೃದ್ಧಿ ಕೆಲಸಗಳಿಗೆ ಕೊಡುಗೆ ನೀಡಬೇಕು ಹಾಗೂ ತಾಯ್ನಿಡಿಗಾಗಿ ನಿಷ್ಠೆಯಿಂದ ದುಡಿಯಬೇಕೆಂದು ಅಧ್ಯಕ್ಷರು ಕರೆ ನೀಡಿರುವುದಾಗಿ ಪತ್ರಿಕೆ ತಿಳಿಸಿದೆ.
ಮಾಜಿ ಸೋವಿಯತ್ ಒಕ್ಕೂಟದ ರಾಷ್ಟ್ರವಾಗಿರುವ ಟರ್ಕ್‌ಮೆನಿಸ್ತಾನವು ಕಳೆದ ವರ್ಷದ ರಮಝಾನ್‌ನಲ್ಲಿ 612 ಕೈದಿಗಳನ್ನು ಬಿಡುಗಡೆಗೊಳಿಸಿತ್ತು.
Next Story





