ಅಳಿಯನನ್ನು ಬೆಂಬಲಿಸದ ಮಾವ..!

ಹೊಸದಿಲ್ಲಿ, ಜೂ.17: ಲಂಡನ್‌ನಲ್ಲಿ ರವಿವಾರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿಗದಿಯಾಗಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಪಾಕ್ ನಾಯಕ ಸರ್ಫರಾಝ್ ಮಾವ ಮೆಹಬೂಬ್ ಹಸನ್ ಕೊಹ್ಲಿ ಪಡೆಯನ್ನು ಬೆಂಬಲಿಸಲಿದ್ದಾರೆ.
ಅವರ ಪ್ರಕಾರ ತನ್ನ ಅಳಿಯನ ತಂಡ ಪಾಕಿಸ್ತಾನವು ಭಾರತದಷ್ಟು ಬಲಿಷ್ಠವಾಗಿಲ್ಲ.ಭಾರತ ಬಲಿಷ್ಠ ತಂಡವಾಗಿದೆ.ಉತ್ತಮ ಆಟಗಾರರು ಇದ್ದಾರೆ.ಭಾರತ ಟ್ರೋಫಿ ಎತ್ತುವುದು ಖಚಿತ.
ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್ ಅಹ್ಮದ್ ತಾಯಿ ಮೂಲತ: ಉತ್ತರ ಪ್ರದೇಶದ ನಿವಾಸಿ. ಮದುವೆಯಾದ ಬಳಿಕ ಕರಾಚಿಗೆ ತೆರಳಿದ್ದರು. ಬಳಿಕ ತನ್ನ ಸಹೋದರ ಮೆಹಬೂಬ್ ಹಸನ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ. ಸ್ಕೈಪ್ ಮೂಲಕ ಅವರು ಮಾತನಾಡುತ್ತಾರೆ.
ಮೆಹಬೂಬ್ ಉತ್ತಪ್ರದೇಶದ ಎತ್ವಾಹ್‌ನಲ್ಲಿ ನೆಲೆಸಿದ್ದಾರೆ. ಸರ್ಫರಾಝ್ ತನ್ನ ಮಾವನನ್ನು ಈ ತನಕ ಮೂರು ಬಾರಿ ಭೇಟಿಯಾಗಿದ್ದಾರೆ. ಕಳೆದ ವರ್ಷ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಂಡಿಗಢದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಪಂದ್ಯದ ವೇಳೆ ಇವರು ಭೇಟಿಯಾಗಿದ್ದರು.
Next Story





