ಪೋರ್ಚುಗಲ್ ನಲ್ಲಿ ಭೀಕರ ಕಾಡ್ಗಿಚ್ಚಿಗೆ 24 ಬಲಿ
ಕಾರಿನೊಳಗೆ ಸುಟ್ಟುಹೋದ ಹಲವರು

ಲಿಸ್ಬಾನ್, ಜೂ.18: ಕೇಂದ್ರ ಪೋರ್ಚುಗಲ್ ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ 24 ಮಂದಿ ಮೃತಪಟ್ಟು ಹಲವರು ಗಾಯಗೊಂಡ ಘಟನೆ ನಡೆದಿದ್ದು, ಹಲವರು ಕಾರಿನೊಳಗೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬೆಂಕಿ ನಂದಿಸಲು 500 ಅಗ್ನಿಶಾಮಕ ಸಿಬ್ಬಂದಿ ಹಾಗೂ 160 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
“ಇದು ಭೀಕರ ದುರಂತ. 24 ಜನರು ಮೃತಪಟ್ಟಿರುವುದು ಈಗಾಗಲೇ ಗೊತ್ತಾಗಿದೆ. ಆದರೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ” ಎಂದು ಪ್ರಧಾನಮಂತ್ರಿ ಅಂಟೋನಿಯೋ ಕೋಸ್ಟಾ ಹೇಳಿದ್ದಾರೆ.
“ಹೊಗೆಯಿಂದಾಗಿ ಮೂವರು ಸಾವನ್ನಪ್ಪಿದರೆ, ಉಳಿದವರು ಕಾರಿನಲ್ಲಿಯೇ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ,. ಗಾಯಾಳುಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯೂ ಸೇರಿದ್ದಾರೆ” ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
Next Story





