ಸಾಂಕ್ರಾಮಿಕ ಜ್ವರ: ಕೇರಳದಲ್ಲಿ ಮತ್ತೆ ಹತ್ತು ಮಂದಿ ಸಾವು

ತಿರುವನಂಪುರಂ,ಜೂ. 18: ಸಾಂಕ್ರಾಮಿಕ ಜ್ವರ ಹಾವಳಿಯಿಂದ ಮತ್ತೆ ಕೇರಳದಲ್ಲಿ ಹತ್ತುಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರಂ ಜಿಲ್ಲೆಯ ನೇಮಂನಲ್ಲಿ 11 ವಯಸ್ಸಿನ ಬಾಲಕ, ಓರ್ವ ಸೈನಿಕ ಡೆಂಗ್ ಜ್ವರಕ್ಕೆ ಬಲಿಯಾಗಿದ್ದಾರೆ.ಆಲಪ್ಪುಳದಲ್ಲಿ ಪಾಲಕ್ಕಾಡ್ ತಿರುವೇಗಪ್ಪುರಗಳಲ್ಲಿ ಡೆಂಗ್ ಜ್ವರದ ಲಕ್ಷಣಗಳು ಗೋಚರಿಸಿವೆ. ಪಾಲಕ್ಕಾಡ್‌ನಲ್ಲಿ ಈರೋಗಕ್ಕೆ 10ವರ್ಷ ದ ಬಾಲಕ ಬಲಿಯಾಗಿದ್ದಾನೆ.
ಎರ್ನಾಕುಳಂ ಮಂಞಪಾರ, ಕ್ಯಾಲಕಟ್ ನ ಮಡಪ್ಪಳ್ಳಿ ಎಂಬಲ್ಲಿ ಇಬ್ಬರು ಎಚ್‌ವನ್‌ಎನ್‌ವನ್‌ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಹೀಗೆ ಕೊಲ್ಲಂ ಪಾಲತ್ತರ, ಕೋಟ್ಟಯಂ ನಾಟ್ಟಕಂಮುಂತಾದೆಡೆ ಮಾರಕ ಜ್ವರಕ್ಕೆ ಜನರು ಬಲಿಯಾಗುತ್ತಿದ್ದಾರೆ. ವಿಪಕ್ಷಗಳು ಆರೋಗ್ಯ ಇಲಾಖೆಯ ವೈಫಲ್ಯವನ್ನು ಎತ್ತಿಹಿಡಿದು ಸರಕಾರವನ್ನು ತರಾಟೆಗೆತ್ತಿಕೊಂಡಿವೆ. ಶನಿವಾರ ಒಂದೇದಿವಸದಲ್ಲಿ ಡೆಂಗ್‌ಜ್ವರ ಚಿಕಿತ್ಸೆಗಾಗಿ 138 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿರುವನಂತಪುರಂ ಜಿಲ್ಲೆಯಲ್ಲಿ 70 ಮಂದಿಗೆ ಡೆಂಗ್‌ಜ್ವರ ಕಂಡುಬಂದಿದೆ. ಕೇರಳ ರಾಜ್ಯಾದ್ಯಂತ ಡೆಂಗ್ ಜ್ವರ ಮತ್ತು ಎಚ್1 ಎನ್1 ಜ್ವರಗಳು ತೀವ್ರ ದಾಳಿಯಿಟ್ಟಿವೆ.





