ಒಂದು ಮಗುವಿಗೆ 3 ಆಧಾರ್ ಕಾರ್ಡ್ !

ಎಡಪ್ಪಾಳ್(ಕೇರಳ), ಜೂ. 18: ಒಂದು ಮಗುವಿಗೆ ಮೂರು ನಂಬರಿನ ಮೂರು ಆಧಾರ್ ಕಾರ್ಡ್ ಸಿಕ್ಕಿದೆ. ಎಲ್ಲ ಮುಖ್ಯ ದಾಖಲೆಗಳನ್ನು ಆಧಾರ್‌ಗೆ ಜೋಡಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ಒಂದೆಡೆ ಇದೆ. ಆದರೆ ಇನ್ನೊಂದೆಡೆ ಆಧಾರ್‌ನ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗುತ್ತಿದೆ. ಒಬ್ಬರಿಗೆ ಮೂರು ಆಧಾರ್ ಕಾರ್ಡುಗಳು ಕೂಡಾ ಲಭಿಸಲು ಸಾಧ್ಯವಿದೆ ಎಂದು ಇದೀಗ ಸಾಬೀತಾಗಿದ್ದು, ಎಡಪಾಳ್ ಪಂಚಾಯತ್‌ನ ಕುಟ್ಟಿಕ್ಕಾಡ್‌ನ ಕೆ.ಕೆ.ಸಬೀರರ ಎರಡು ವರ್ಷದ ಪುತ್ರಿ ಪಿಪಿ ಸನಾ ಮಹ್ರಿನ್‌ಗೆ ಜೂನ್ ತಿಂಗಳಲ್ಲಿ ಮೂರು ಆಧಾರ್‌ಗಳು ಪೋಸ್ಟ್‌ನಲ್ಲಿ ಬಂದು ಸಿಕ್ಕಿವೆ.
ಕಳೆದ ನವೆಂಬರ್‌ನಲ್ಲಿ ಸನಾ ಮಹ್ರಿನ್‌ಳ ಮನೆಯ ಸಮೀಪದ ಅಂಗನವಾಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 724556229728, 784775068517, 408506773512 ಎನ್ನುವ ಮೂರು ಬೇರೆ ಬೇರೆ ನಂಬರ್‌ಗಳ ಆಧಾರ್ ಕಾರ್ಡ್‌ಗಳು ಲಭಿಸಿದ್ದು, ಇದರಲ್ಲಿ ಯಾವ ಕಾರ್ಡನ್ನು ಬಳಸಬೇಕು ಎನ್ನುವ ಸಮಸ್ಯೆ ಕುಟುಂಬ ಎದುರಿಸುತ್ತಿದೆ.
Next Story





