ಭಾರತದ ಗೆಲುವಿಗೆ 339 ರನ್ ಗಳ ಸವಾಲು

ಲಂಡನ್, ಜೂ.18: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಇಂದು ಪಾಕಿಸ್ತಾನದ ವಿರುದ್ಧ ಗೆಲುವಿಗೆ 339 ರನ್‌ಗಳ ಕಠಿಣ ಸವಾಲು ಪಡೆದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಆರಂಭಿಕ ದಾಂಡಿಗ ಫಾಖರ್ ಝಮಾನ್ ಅವರ ಚೊಚ್ಚಲ ಶತ(114), ಅಝರ್ ಅಲಿ (59)ಮತ್ತು ಮುಹಮ್ಮದ್ ಹಫೀಝ್ (ಔಟಾಗದೆ 57) ಅರ್ಧಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಳ್ಲಿ 4 ವಿಕೆಟ್ ನಷ್ಟದಲ್ಲಿ 338 ರನ್ ಗಳಿಸಿದೆ.
ಬಾಬರ್ ಅಝಮ್ 46ರನ್, ಶುಐಬ್ ಮಲಿಕ್ 12ರನ್, ಇಮಾದ್ ವಸೀಮ್ ಔಟಾಗದೆ 25 ರನ್ ಗಳಿಸಿದರು.
Next Story





