ಕಳಸಬೈಲು ಮಹಮ್ಮಾಯಿ ದೇವಸ್ಥಾನಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಗುದ್ದಲಿಪೂಜೆ

ಮೂಡುಬಿದಿರೆ,ಜೂ.18: ಕಲ್ಲಮುಂಡ್ಕೂರು ಕಳಸಬೈಲು ಮಹಮ್ಮಾಯಿ ದೇವಸ್ಥಾನಕ್ಕೆ ಶಾಸಕರ ನಿಧಿಯಿಂದ ರೂ.1.45 ಲಕ್ಷ ಬಿಡುಗಡೆಯಾಗಿದ್ದು, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಗುದ್ದಲಿ ಪೂಜೆ ನೆರವೇರಿಸಿದರು.
ಕಲ್ಲಮುಂಡ್ಕೂರು ಪಂಚಾಯಿತಿ ಮಾಜಿ ಅಧ್ಯಕ್ಷ ಜಗತ್ಪಾಲ ಭಂಡಾರಿ, ಗುತ್ತಿಗೆದಾರ ಅರುಣ್ ಕುಮಾರ್, ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್, ಗುರಿಕಾರ ಅಪ್ಪು ನಾಯ್ಕಾ ಮತ್ತು ಮರಾಠಿ ಮಹಮ್ಮಾಯಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





