ಉಚಿತ ಆರೋಗ್ಯ ತಪಾಸಣೆ, ಮಹಾಹಿತಿ ಶಿಬಿರವು

ಮಂಗಳೂರು, ಜೂ. 18: ಯುನಿಟಿ ಆಸ್ಪತ್ರೆ ಮಂಗಳೂರು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಹಾಹಿತಿ ಶಿಬಿರವು ಪಚ್ಚನಾಡಿ ಆಶ್ರಯ ಕಾಲನಿಯಲ್ಲಿ ರವಿವಾರ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.
ಮನಪಾ ಆಯುಕ್ತ ಮುಹಮ್ಮದ್ ನಝೀರ್, ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರಹ್ಮಾನ್, ಆಸ್ಪತ್ರೆಯ ನಿರ್ವಾಹಕ ದೇವರಾಜ್ ಬಿ., ಹೆಲ್ತ್ ಎಜುಕೇಶನ್ ಆ್ಯಂಡ್ ಸೋಷಿಯಲ್ ಜಸ್ಟಿಸ್‌ನ ಅಧ್ಯಕ್ಷೆ ನಾಗವೇಣಿ, ಎಂಸಿಸಿ ಇದರ ವೈದ್ಯಕೀಯ ನಿರ್ದೇಶಕ ಡಾ.ಮಂಜಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸ್ತ್ರೀ ರೋಗ ತಜ್ಞೆ ಡಾ.ಭಾರತಿ ನಿರ್ಮಲ್, ಎಲುಬು ಮತ್ತು ಕೀಲು ತಜ್ಞ ಡಾ.ಸಚ್ಚಿದಾನಂದ ಪೈ, ಶ್ವಾಸಕೋಶ ತಜ್ಞ ಡಾ.ಅಲ್ಕಾ ಭಟ್, ಡಾ. ಶಿಹಾಬ್ ಸಹಕರಿಸಿದರು.
Next Story





