ಏಗಾನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಕೆರ್ಬರ್

ಬರ್ಮಿಂಗ್‌ಹ್ಯಾಮ್, ಜೂ.18: ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಈ ವಾರ ಆರಂಭವಾಗಲಿರುವ ಏಗಾನ್ ಕ್ಲಾಸಿಕ್ ಟೆನಿಸ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. ಕೆರ್ಬರ್ ಸ್ನಾಯು ಸೆಳೆತದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಜರ್ಮನಿಯ ಆಟಗಾರ್ತಿಗೆ ಮ್ಯಾಡ್ರಿಡ್‌ನಲ್ಲಿ ನಡೆದ ಮೂರನೆ ಸುತ್ತಿನ ಪಂದ್ಯದ ವೇಳೆ ಗಾಯ ಕಾಣಿಸಿಕೊಂಡಿತ್ತು.
ಆವೆಮಣ್ಣಿನ ಟೆನಿಸ್ ಕೋರ್ಟ್‌ನಲ್ಲಿ ಕೆರ್ಬರ್ ಕಳಪೆ ಪ್ರದರ್ಶನ ನೀಡಿದ್ದು, ಪ್ರತಿಷ್ಠಿತ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು.
ಕೆರ್ಬರ್ ಏಗಾನ್ ಕ್ಲಾಸಿಕ್ ಟೂರ್ನಿಯಿಂದ ಹೊರಗುಳಿಯುತ್ತಿರುವ ಎರಡನೆ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಸಿಮೊನಾ ಹಾಲೆಪ್ ಮಂಡಿನೋವಿನಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ.
Next Story





