2018ರ ಐಸಿಸಿ ಟ್ವೆಂಟಿ-20 ವಿಶ್ವಕಪ್ ರದ್ದು?

ಹೊಸದಿಲ್ಲಿ, ಜೂ.18: ಮುಂದಿನ ವರ್ಷ ದೇಶದ ಅಗ್ರ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ವ್ಯಸ್ತವಾಗಿರುವ ಹಿನ್ನೆಲೆಯಲ್ಲಿ 2018ರಲ್ಲಿ ನಡೆಯಬೇಕಾಗಿದ್ದ ಏಳನೆ ಆವೃತ್ತಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ರದ್ದಾಗುವ ಸಾಧ್ಯತೆಯಿದೆ. ಟೂರ್ನಿಯು 2020ಕ್ಕೆ ಮುಂದೂಡಲ್ಪಡುವ ನಿರೀಕ್ಷೆಯಿದೆ.
ಐಸಿಸಿಯ ಉನ್ನತ ಮೂಲಗಳ ಪ್ರಕಾರ ಮುಂದಿನ ಆವೃತ್ತಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ 2020ಕ್ಕೆ ನಡೆಯಲಿದೆ. ಆದರೆ, ಟೂರ್ನಿ ನಡೆಯುವ ಸ್ಥಳ ಇನ್ನೂ ನಿರ್ಧಾರವಾಗಿಲ್ಲ.
ನಾವು 2018ರ ವಿಶ್ವ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯುತ್ತಿರುವುದು ನಿಜ. ಮುಂಬರುವ ಟೂರ್ನಿಗೆ ಇನ್ನೂ ಸ್ಥಳವೇ ನಿಗದಿಯಾಗಿಲ್ಲ. ಮುಂದಿನ ವರ್ಷ ಪ್ರಮುಖ ತಂಡಗಳ ನಡುವೆ ಬಹಳಷ್ಟು ದ್ವಿಪಕ್ಷೀಯ ಸರಣಿ ನಡೆಯುತ್ತಿರುವುದು ಟೂರ್ನಿಯ ಮುಂದೂಡಿಕೆಗೆ ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಈ ಹಿಂದಿನ ಆವೃತ್ತಿಯ ಟೂರ್ನಿಗಳು ದಕ್ಷಿಣ ಆಫ್ರಿಕ(2007), ಇಂಗ್ಲೆಂಡ್(2009), ವೆಸ್ಟ್‌ಇಂಡೀಸ್(2010), ಶ್ರೀಲಂಕಾ(2012), ಬಾಂಗ್ಲಾದೇಶ(2014) ಹಾಗೂ ಭಾರತ(2016)ದಲ್ಲಿ ನಡೆದಿದ್ದವು.
ಎಲ್ಲ ಕ್ರಿಕೆಟ್ ಮಂಡಳಿಗಳು ತಮ್ಮದೇ ಆದ ಫ್ರಾಂಚೈಸಿ ಆಧರಿತ ಟ್ವೆಂಟಿ-20 ಲೀಗ್‌ಗಳನ್ನು ನಡೆಸುತ್ತಿವೆ. ಟ್ವೆಂಟಿ-20 ವಿಶ್ವಕಪ್ ತುಂಬಾ ಜನಪ್ರಿಯತೆ ಗಳಿಸಿದ್ದರೂ, ಈ ಟೂರ್ನಿಯು ಮುಂದೂಡಲ್ಪಡುವುದರಿಂದ ಯಾವ ಕ್ರಿಕೆಟ್ ಮಂಡಳಿಗಳಿಗೆ ನಷ್ಟವಿಲ್ಲ.







