ಎರಡು ವಾರಗಳಿಂದ ಕೈಕೊಟ್ಟ ಕರೆಂಟ್: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ
ಸಬ್ಬೇನಹಳ್ಳಿಯಲ್ಲಿ ವಿದ್ಯುತ್ ಸಮಸ್ಯೆ: ಕತ್ತಲಲ್ಲಿ ಕಾಲ ಕಳೆಯುತ್ತಿರುವ ಜನರು

ಮೂಡಿಗೆರೆ, ಜೂ.19: ಫಲ್ಗುಣಿ ಗ್ರಾಪಂ ವ್ಯಾಪ್ತಿಯ ಸಬ್ಬೇನಹಳ್ಳಿ ಮತ್ತು ಕೋಡುದಿಣ್ಣೆ ಗ್ರಾಮದಲ್ಲಿ ಎರಡು ವಾರದಿಂದ ವಿದ್ಯುತ್ ಕೈಕೊಟ್ಟಿದ್ದು ಜನರು ಕತ್ತಲಿನಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ವಿದ್ಯುತ್ ಇಲ್ಲದೇ ಗ್ರಾಮಸ್ಥರು ಆಕ್ರೋಶಗೊಂಡಿದ್ದು ವಿದ್ಯುತ್ ಸಮಸ್ಯೆ ಬಗೆ ಹರಿಯದಿದ್ದರೆ ಪ್ರತಿಭಟನೆಗೆ ನಿರ್ಧರಿಸಲಾಗುವುದು ಎಂದು ತಾಲೂಕು ಕರವೇ ಸಂಘಟನೆಯ ಗೌರವಾಧ್ಯಕ್ಷ ಹೊರಟ್ಟಿ ರಘು ತಿಳಿಸಿದ್ದಾರೆ.
ಅವರು ಸೋಮವಾರ ಹೇಳಿಕೆ ನೀಡಿದ್ದು, ಎಡು ವಾರದಿಂದ ಹಿಂದೆ ಪಲ್ಗುಣಿ ಗ್ರಾಪಂ ವ್ಯಾಪ್ತಿಯ ಸಬ್ಬೇನಹಳ್ಳಿಯಲ್ಲಿ ಗಾಳಿ ಮಳೆಯಿಂದಟ್ರಾನ್ಸ್‌ಪಾರ್ಮರ್ ಸುಟ್ಟು ಹೋಗಿದೆ.ಜನರು ಕತ್ತಲಲ್ಲಿಯೇ ಕಳೆಯುವಂತಾಯಿತು.ಮೆಸ್ಕಾಂ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಇವತ್ತು ಸರಿಯಾಗುತ್ತದೆ. ನಾಳೆ ಸರಿಯಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ವಿದ್ಯುತ್ ಇಲ್ಲದೇ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುತ್ತಿದ್ದು ಜನರು ವಿದ್ಯುತ್ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಮೆಸ್ಕಾಂ ಅಧಿಕಾರಿಗಳಲ್ಲಿ ಕೇಳಿದರೆ ಆ ಭಾಗದ ಟ್ರಾನ್ಸ್‌ಪಾರ್ಮರ್ ಸುಟ್ಟು ಹೋಗಿದ್ದು ಅದು ಚಿಕ್ಕಮಗಳೂರಿನಿಂದ ಮಂಜೂರಾಗಿ ಬರಬೇಕಿದೆ.
ಸಬ್ಬೇನಹಳ್ಳಿ,ಫಲ್ಗುಣಿ,ಕೋಡದಿಣ್ಣೆ ಭಾಗದ ಗ್ರಾಮಸ್ಥರಿಗೆ ಕರೆಂಟ್ ಇಲ್ದದೆ ಎರಡು ವಾರ ಕಳೆದಿದ್ದು ಗ್ರಾಮಸ್ಥರು ತಾಳ್ಮೆಯಿಂದ ವರ್ತಿಸಿದ್ದಾರೆ.ವಿಷಯ ತಿಳಿದಿದ್ದರೂ ಮೆಸ್ಕಾಂ ಅಧಿಕಾರಿಗಳು ಈ ಬಾಗಕ್ಕೆ ಸುಳಿದಿಲ್ಲ.ಆದಷ್ಟು ಬೇಗ ಸಬ್ಬೇನಹಳ್ಳಿ ಸುತ್ತಮುತ್ತ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು.ಇಲ್ಲಇದ್ದರೆ ಬಣಕಲ್ ಮೆಸ್ಕಾಂ ಕಛೇರಿ ಎದುರುಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.







