ಧಾರ್ಮಿಕ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ

ಪಡುಬಿದ್ರಿ,ಜೂ.19: ಕಳ್ಳತನ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮರಗಳನ್ನು ಎಲ್ಲಾ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಡುಬಿದ್ರಿ ಠಾಣೆಯ ಉಪನಿರೀಕ್ಷಕರಾದ ಸತೀಶ್ ಹೇಳಿದರು.
ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ರಮ್ಜಾನ್ ಹಬ್ಬದ ಪೂರ್ವಭಾವಿಯಾಗಿ ಕರೆದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಕಳ್ಳತನ, ಹಾಗೂ ಅಪರಿಚಿತರು ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಕ್ಯಾಮರಾ ಅಳವಡಿಸಲು ಆಡಳಿತ ಸಮಿತಿ ಮುಂದಾಗಬೇಕು ಎಂದು ಅವರು ಹೇಳಿದರು.
ಕಟ್ಟುನಿಟ್ಟು ಕ್ರಮ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಕೆಲವಡೆಗಳಲ್ಲಿ ಮಾಧಕ ದೃವ್ಯ ಸೇವನೆಗಳು ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಸತೀಶ್, ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಮತ್ತು ಕಂಚಿನಡ್ಕದಲ್ಲಿ ಈ ಬಗ್ಗೆ ದೂರುಗಳು ಬರುತ್ತಿತ್ತು. ಕಂಚಿನಡ್ಕದಲ್ಲಿ ಅಡ್ಡೆಯನ್ನು ಪತ್ತೆ ಹಚ್ಚಿ ಅಂತಹವರನ್ನು ಕರೆಸಿ ಸೂಕ್ತ ಕ್ರಮಕೈಗೊಂಡಿದ್ದು, ಹೊರಗಿನಿಂದ ಬರುವ ಜನರಿಂದ ಈ ಕೃತ್ಯ ನಡೆಯುತ್ತಿದೆ. ಮುಂದೆ ಈ ಭಾಗದಲ್ಲಿ ಅಂತಹ ಜಾಲಗಳು ನಡೆಯದಂತೆ ಎಚ್ಚರವಹಿಸಲಾಗುವುದು. ಆದರೆ ಹೆಜಮಾಡಿಯಲ್ಲಿ ಇಂತಹ ಕೃತ್ಯ ನಡೆಯುವ ಬಗ್ಗೆ ಸರಿಯಾದ ಮಾಹಿತಿ ಸಿಗುತಿಲ್ಲ. ಈ ಬಗ್ಗೆ ಸ್ಥಳೀಯರ ಸಹಕಾರ ಅತೀ ಅಗತ್ಯ ಎಂದರು.
ರಮ್ಜಾನ್ ಹಬ್ಬದ ಹಿನ್ನಲೆಯಲ್ಲಿ ಎಲ್ಲಾ ಧರ್ಮದವರೂ ಸಹಕರಿಸಬೇಕು ಎಂದ ಅವರು ಇದುವರೆಗೂ ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಇದೇ ರೀತಿಯ ಸಹಕಾರ ಸಹಬಾಳ್ವೆ ಅತೀ ಅಗತ್ಯ ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಶಬ್ಬೀರ್ ಹುಸೇನ್, ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಗ್ರಾಪಂ ಸದಸ್ಯರಾದ ಬುಡಾನ್ ಸಾಹೇಬ್, ಹಸನ್ ಕಂಚಿನಡ್ಕ, ಪೊಲ್ಯ ಮಸೀದಿ ಕಮಿಟಿ ಸದಸ್ಯ ಹಮೀದ್ ಶಾ, ಎರ್ಮಾಳು ಮಸೀದಿ ಸಮಿತಿ ಸದಸ್ಯ ಶಫಿ ಉಚ್ಚಿಲ, ಮುಝಾಫರ್ ಉಚ್ಚಿಲ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸಿರಾಜ್ ಎನ್.ಎಚ್, ಇನ್ನಾ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಕೋಟ್ಯಾನ್ ಇನ್ನಾ, ಪಡುಬಿದ್ರಿ ಇಆನತುಲ್ ಮಸಾಕೀನ್ ಅಧ್ಯಕ್ಷ ಹುಸೈನ್ ಕಾಡಿಪಟ್ಣ,
ಹರೀಶ್ ಕಂಚಿನಡ್ಕ, ಇಲ್ಯಾಸ್ ಕಂಚಿನಡ್ಕ ಉಪಸ್ಥಿತರಿದ್ದರು.







