ಸ್ವಾಧಾರ ಗೃಹ ಯೋಜನೆ: ಅರ್ಜಿ ಆಹ್ವಾನ
ಉಡುಪಿ, ಜೂ.19: ಉಡುಪಿ ಜಿಲ್ಲೆಯಲ್ಲಿ ಸ್ವಾಧಾರ ಗೃಹ ಯೋಜನೆಯಡಿ ಹೊಸ ಕೇಂದ್ರವನ್ನು ಪ್ರಾರಂಭಿಸಲು ಅರ್ಹ ಪ್ರಸ್ತಾವನೆಗಳನ್ನು ಸಲ್ಲಿಸಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ, ನೊಂದಣಿ ನವೀಕರಣ ಪ್ರಮಾಣ ಪತ್ರ, ಕಳೆದ ಮೂರು ವರ್ಷಗಳ ಅಡಿಟ್ ವರದಿ, ವಾರ್ಷಿಕ ವರದಿ ಹಾಗೂ ಪ್ರಗತಿ ವರದಿ, ಕಮಿಟಿ ಸದಸ್ಯರ ವಿವರ, ಬಾಡಿಗೆ ಕರಾರು ಪತ್ರ, ಕಟ್ಟಡದ ಛಾಯಾಚಿತ್ರದ ದಾಖಲಾತಿಗಳನ್ನು ಸಲ್ಲಿಸಬೇಕು. ಜು.2 ಅರ್ಜಿ ಸಲ್ಲಿಸಲು ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 1 ನೇ ಮಹಡಿ, ಬಿ ಬ್ಲಾಕ್ ರಜತಾದ್ರಿ ಮಣಿಪಾಲ ದೂರವಾಣಿ ಸಂಖ್ಯೆ 0820-2574972ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





