ಭಾರತದೊಂದಿಗಿನ ವಾಯು ಕಾರಿಡಾರ್‌ಗೆ ಅಫ್ಘಾನ್ ಅಧ್ಯಕ್ಷ ಚಾಲನೆ

ಕಾಬೂಲ್, ಜೂ. 19: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸೋಮವಾರ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಥಮ ಅಫ್ಘಾನಿಸ್ತಾನ-ಭಾರತ ವಾಯು ಕಾರಿಡಾರನ್ನು ಉದ್ಘಾಟಿಸಿದರು. ಈ ವಾಯು ಮಾರ್ಗವು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸದೆ, ಭಾರತ ಮತ್ತು ಅಫ್ಘಾನಿಸ್ತಾನಗಳ ನಡುವೆ ನೇರ ವಾಯು ಸಂಪರ್ಕವನ್ನು ಏರ್ಪಡಿಸುತ್ತದೆ.
ಉಭಯ ದೇಶಗಳ ನಡುವಿನ ವ್ಯಾಪಾರವನ್ನು ವೃದ್ಧಿಗೊಳಿಸುವುದಕ್ಕಾಗಿ ಈ ನೂತನ ವಾಯು ಮಾರ್ಗವನ್ನು ರೂಪಿಸಲಾಗಿದೆ.
ವಾಯು ಕಾರಿಡಾರ್‌ಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ ಘನಿ, ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಅಫ್ಘಾನಿಸ್ತಾನವನ್ನು ರಫ್ತುದಾರ ದೇಶವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
Next Story





