ಹರಿದ ರಾಷ್ಟ್ರಧ್ವಜ:ಸಾರ್ವಜನಿಕರ ಆಕ್ರೋಶ

ಮಂಡ್ಯ, ಜೂ.19: ಗ್ರಾಮ ಪಂಚಾಯತ್ ಕಛೇರಿ ಮೇಲೆ ಹರಿದ ರಾಷ್ಟ್ರಧಜ್ವವನ್ನು ಹಾರಿಸುವ ಮೂಲಕ ರಾಷ್ಟ್ರಧಜ್ವಕ್ಕೆ ಅವಮಾನ ಮಾಡಿರುವ ಘಟಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತ್‌ನಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಕೆನ್ನಾಳು ಗ್ರಾಪಂನ ಪಿಡಿಓ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹರಿದಿರುವ ರಾಷ್ಟ್ರಧ್ವಜವನ್ನು ಹಾರಿಸಿ ಬೇಜವಾಬ್ಧಾರಿ ಪ್ರದರ್ಶನ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ವೀಕ್ಷಿಸಿದ ಸಾರ್ವಜನಿಕರು ಹರಿದ ರಾಷ್ಟ್ರಧ್ಜಜ ಹಾರಾಡುತ್ತಿರುವ ವೀಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ.
ಹರಿದ ರಾಷ್ಟ್ರಧ್ವಜವನ್ನು ಹಾರಾಡಿಸಿರುವ ಸುದ್ದಿಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಹರಿದ ರಾಷ್ಟ್ರಧ್ವಜವನ್ನು ಬದಲಿಸಿ ಹೊಸ ರಾಷ್ಟ್ರಧ್ವಜವನ್ನು ಹಾರಾಡಿಸಿದ್ದಾರೆ.
ಪಂಚಾಯತ್ ಕಚೇರಿ ಮೇಲೆ ಹರಿದ ರಾಷ್ಟ್ರಧ್ವಜವನ್ನು ಹಾರಿಸಿರುವ ಪಂಚಾಯತ್ ಪಿಡಿಓ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ.





