ಲಂಡನ್ ಬೆಂಕಿ ದುರಂತ: ಮೃತರ ಸಂಖ್ಯೆ 79
ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್

ಲಂಡನ್, ಜೂ. 19: ಕಳೆದ ವಾರ ಪಶ್ಚಿಮ ಲಂಡನ್‌ನ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ನಡೆದ ಭೀಕರ ಬೆಂಕಿ ಅಪಘಾತದಲ್ಲಿ ಕನಿಷ್ಠ 79 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಸೋಮವಾರ ಹೇಳಿದ್ದಾರೆ.
ಆದರೆ, ಕೆಲವು ಶವಗಳು ತೀವ್ರವಾಗಿ ಸುಟ್ಟುಹೋಗಿದ್ದು ಅವುಗಳನ್ನು ಗುರುತಿಸಲು ಕಷ್ಟವಾಗಬಹುದು ಎಂದು ಪೊಲೀಸರು ಅಭಿಪ್ರಾಯಪಡುತ್ತಾರೆ.
ತನಿಖೆ ಮುಂದುವರಿದಂತೆ ಮೃತರ ಸಂಖ್ಯೆಯಲ್ಲಿಯೂ ಬದಲಾವಣೆಯಾಗಬಹುದು ಎಂದು ಅವರು ಹೇಳುತ್ತಾರೆ.
24 ಮಹಡಿಯ ಗ್ರೆನ್‌ಫೆಲ್ ಟವರ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ಬಗ್ಗೆ ಪ್ರತ್ಯೇಕ ತನಿಖೆಗಳಿಗೆ ಪೊಲೀಸ್ ಮತ್ತು ಸರಕಾರ ಆದೇಶ ನೀಡಿವೆ.
Next Story





