ಕಲ್ಲಡ್ಕ ಘಟನೆ: ಮತ್ತೆ ನಾಲ್ವರ ಬಂಧನ

ಬಂಟ್ವಾಳ, ಜೂ. 19: ಕಲ್ಲಡ್ಕದಲ್ಲಿ ಜೂನ್ 13ರಂದು ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲಡ್ಕ ಮತ್ತು ಆಸುಪಾಸಿನ ನಿವಾಸಿಗಳಾದ ಅಬೂಬಕ್ಕರ್ ಸಿದ್ದೀಕ್, ಮುಹಮ್ಮದ್ ಆರೀಫ್, ಸಿರಾಜುದ್ದೀನ್ ಮತ್ತು ಅಬ್ದುಲ್ ಸಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಸಿದ್ದೀಕ್ ಮತ್ತು ಆರೀಫ್‌ನನ್ನು ರವಿವಾರ ಕಲ್ಲಡ್ಕದಲ್ಲಿ ಬಂಧಿಸಿದ್ದರೆ ಸಿರಾಜುದ್ದೀನ್ ಮತ್ತು ಅಬ್ದುಲ್ ಸಮದ್‌ನನ್ನು ಸೋಮವಾರ ತುಂಬೆ ಖಾಸಗಿ ಆಸ್ಪತ್ರೆಯಿಂದ ಬಂಧಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





