ಬಾಲಕನ ಪೋಷಕರ ಪತ್ತೆಗೆ ಮನವಿ

ಮಂಡ್ಯ, ಜೂ.19: ನಗರದ ರೈಲ್ವೆ ನಿಲ್ದಾಣದಲ್ಲಿ ಮೇ 16 ರಂದು 10 ವರ್ಷದ ಬಿಲಾಲ್ ಎಂಬ ಬಾಲಕ ಸಿಕ್ಕಿದ್ದು, ಈ ಬಾಲಕನನ್ನು ಮರೀಗೌಡ ಬಡಾವಣೆಯ ಬಾಲಕರ ಬಾಲಮಂದಿರದಲ್ಲಿ ಪೋಷಣೆ ಮಾಡಲಾಗುತ್ತಿದೆ.
ಬಾಲಕನ ಪೋಷಕರು ಇದ್ದಲ್ಲಿ, ಮೂಲ ಅಗತ್ಯ ದಾಖಲಾತಿಗಳೊಂದಿಗೆ ಹಾಗೂ ಬಾಲಕ ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಪ್ರಥಮ ವರ್ತಮಾನ ವರದಿಯ ಜತೆಗೆ ಬಾಲಕರ ಬಾಲಮಂದಿರ (ದೂ.08232-223222) ಸಂಪರ್ಕಿಸಲು ಕೋರಲಾಗಿದೆ.
Next Story





