ಭಾರತಕ್ಕೆ ಗೆಲುವು ತಂದ ತಾನಿಯಾ ಸಚ್‌ದೇವ್
ವಿಶ್ವ ಟೀಮ್ ಚೆಸ್ ಚಾಂಪಿಯನ್‌ಶಿಪ್

ಮಾಸ್ಕೋ, ಜೂ.19: ಅಮೆರಿಕದ ಚಾಂಪಿಯನ್ ಸಬಿನಾ ಫೋಸರ್‌ರನ್ನು ಮಣಿಸಿದ ಅಂತಾರಾಷ್ಟ್ರೀಯ ಮಾಸ್ಟರ್ ತಾನಿಯಾ ಸಚ್‌ದೇವ್ ವಿಶ್ವ ಮಹಿಳೆಯರ ಟೀಮ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡಕ್ಕೆ 2.5-1.5 ಅಂತರದ ಗೆಲುವು ತಂದುಕೊಟ್ಟಿದ್ದಾರೆ.
ಸೋಮವಾರ ಭಾರತಕ್ಕೆ ಶುಭ ದಿನವಾಗಿ ಪರಿಣಮಿಸಿದ್ದು, ಮೂರು ಪಂದ್ಯಗಳಲ್ಲೂ ಡ್ರಾ ಸಾಧಿಸಿತು. ಡಿ. ಹರಿಕಾ, ಪದ್ಮಿನಿ ರಾವತ್, ಎಸ್.ವಿಜಯಲಕ್ಷ್ಮೀ ಡ್ರಾ ಸಾಧಿಸಿದರು. ಈ ಗೆಲುವಿನ ಮೂಲಕ ಭಾರತದ ಮಹಿಳಾ ತಂಡ ಮೂರು ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಪೊಲೆಂಡ್(3 ಅಂಕ) ಹಾಗೂ ಉಕ್ರೇನ್ (3)ತಂಡದೊಂದಿಗೆ ಎರಡನೆ ಸ್ಥಾನವನ್ನು ಹಂಚಿಕೊಂಡಿತು. ನಾಲ್ಕಂಕವನ್ನು ಗಳಿಸಿರುವ ರಶ್ಯ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
Next Story





