ಅಪಘಾತದಲ್ಲಿ ಎಂಬಿಎ ವಿದ್ಯಾರ್ಥಿನಿ ಸಾವು : ಮತ್ತೋರ್ವನಿಗೆ ಗಾಯ

ಹಾಸನ,ಜೂ.20: ಕಾಲೇಜಿಗೆ ಹೋಗಲು ಸ್ನೇಹಿತನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ವಿದ್ಯಾರ್ಥಿನಿ ಸಾವನಪ್ಪಿದರೆ ಜೊತೆಯಲ್ಲಿದ್ದ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ನಗರದ ಚನ್ನಪಟ್ಟಣ ಸಮೀಪ ಬೈಪಾಸ್‌ನಲ್ಲಿ ರಾಜೀವ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಬಿಎ ಓದುತ್ತಿರುವ ವಿದ್ಯಾರ್ಥಿನಿ ತಾಲೂಕಿನ ಶಾಂತಿಗ್ರಾಮ ಹೋಬಳಿ ಬೆಳ್ಳಿಕೊಪ್ಪು ನಿವಾಸಿ ಬಿ.ಕೆ. ಸಹನ (22) ಎಂಬವರೆ ಅಪಘಾತದಲ್ಲಿ ಮೃತಪಟ್ಟ ಯುವತಿ. ತಾಲೂಕಿನ ಕಟ್ಟಾಯ ಹೋಬಳಿಯ ಮುದ್ನಳ್ಳಿ ನಿವಾಸಿ ಸುನೀಲ್ (24) ಗಂಭೀರ ಗಾಯಗೊಂಡು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದಿನಂತೆ ಕಾಲೇಜಿಗೆಂದು ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಟ್ಯಾಕ್ಟರ್ ಒಂದಕ್ಕೆ ಢಿಕ್ಕಿ ಹೊಡೆದು ಬೈಪಾಸ್ ರಸ್ತೆಗೆ ಬಿದ್ದಿದ್ದು, ಹಿಂಬಾಗದಿಂದ ಬಂದ ಲಾರಿಯೊಂದು ಇವರ ಮೇಲೆ ಹರಿದಿದೆ. ಸಹನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Next Story





