ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಬಂಧನ

ಬೆಂಗಳೂರು, ಜೂ.20: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿವೇಕನಗರದ 8ನೆ ಮುಖ್ಯರಸ್ತೆಯ ನಿವಾಸಿ ಅಶೋಕ್ ಕುಮಾರ್ ಗುಪ್ತಾ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಂದರಲ್ಲಿ ಪರವಾನಗಿ ಪಡೆಯದೆ ಮೀಟರ್ ಬಡ್ಡಿ ಹಣಕಾಸಿನ ವ್ಯವಹಾರ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈತನಿಂದ ವ್ಯವಹಾರದಲ್ಲಿ ಬಳಸುತ್ತಿದ್ದ ಖಾಲಿ ದಸ್ತಾವೇಜು ಪತ್ರಗಳು, ಸಹಿಯಿರುವ ಖಾಲಿ ದಸ್ತಾವೇಜು ಪತ್ರಗಳು, ಹೆಸರು ನಮೂದಿಸದ ಚೆಕ್‌ಗಳು, ವಾಹನಗಳಿಗೆ ಸಂಬಂಧಿಸಿದ ಆರ್‌ಸಿ ಸ್ಮಾಟ್‌ಕಾರ್ಡ್‌ಗಳನ್ನು ವಶಪಡಿಸಿಕೊಂಡು, ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
Next Story





