ತೊಗರಿ ಬಾಕಿ ಹಣ ಒಂದು ವಾರದಲ್ಲಿ ಸಂದಾಯ: ಕೃಷ್ಣಬೈರೇಗೌಡ

ಬೆಂಗಳೂರು, ಜೂ.20: ತೊಗರಿ ಬೆಳೆಗಾರರಿಗೆ ಕೊಡಬೇಕಾದ ಬಾಕಿ ಹಣವನ್ನು ಮುಂದಿನ ಒಂದು ವಾರದೊಳಗೆ ಕೊಡಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್‌ನಲ್ಲಿ ಸದಸ್ಯ ಬಸವರಾಜ ಪಾಟೀಲ್ ಇಟಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಂದ 1900ಕೋಟಿ ರೂ. ವೌಲ್ಯದ ತೊಗರಿಯನ್ನು ಖರೀದಿ ಮಾಡಲಾಗಿದೆ. ಅದರಲ್ಲಿ ಕೇವಲ 100ರಿಂದ 150ಕೋಟಿ ರೂ. ಸಾಲ ಬಾಕಿಯಿದೆ ಎಂದು ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಒಂದು ವಾರದೊಳಗೆ ಬಾಕಿಯಿರುವ 150ಕೋಟಿ ರೂ.ಹಣವನ್ನು ಸಂದಾಯ ಮಾಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ತೊಗರಿ ಬೆಳೆಗಾರರು ಆತಂಕ ಪಡಬೇಕಾಗಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Next Story





