ಮಕ್ಕಳನ್ನು ಸಮಾಜ ಅರಿಯುವ ರೀತಿ ಬೆಳೆಸಿ: ಡಾ.ಥಾಮಸ್ ಕ್ವಾಡ್ರಸ್

ಉಡುಪಿ, ಜೂ.20: ಮಗು ಹುಟ್ಟಿದಾಗಿನಿಂದಲೇ ಹಂತಹಂತವಾಗಿ ಬೌದ್ಧಿಕ ಹಾಗೂ ಮಾನಸಿಕವಾಗಿ ಬೆಳೆಯುತ್ತ ಹೋಗುತ್ತದೆ. ಆ ಬೆಳವಣಿಗೆಯ ಸಂದರ್ಭದಲ್ಲಿ ಮಗು ತನ್ನನ್ನು ತಾನು ಅರಿಯುವುದರ ಜೊತೆಗೆ ಸಮಾಜವನ್ನು ಅರಿತುಕೊಳ್ಳುವ ಹಾಗೇ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಅಂಬಲಪಾಡಿಯ ಗ್ಲೋವಿನ್‌ಸ್ಟಾರ್ ಅಕಾಡೆಮಿಯ ನಿರ್ದೇಶಕ ಡಾ ಥಾಮಸ್ ಕ್ವಾಡ್ರಸ್ ಹೇಳಿದ್ದಾರೆ.
ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಟ್ರೈಸೆಂಟನರಿ ಹಾಲ್‌ನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜೀವನ ಕೇವಲ ತನಗೋಸ್ಕರ ಮಾತ್ರವಾಗಿರಬಾರದು ಎಂದ ಹೇಳಿದರು.
Next Story





