ಸ್ಕೂಟರ್‌ಗೆ ಢಿಕ್ಕಿ ಹಿನ್ನಲೆ : ಟಾಟಾ ಸುಮೋ ಚಾಲಕನಿಗೆ ತಂಡದಿಂದ ಹಲ್ಲೆ
ಮಂಗಳೂರು, ಜೂ.20: ಸ್ಕೂಟರ್‌ಗೆ ಢಿಕ್ಕಿ ಹೊಡೆದ ಸಿಟ್ಟಿನಲ್ಲಿ ತಂಡವೊಂದು ಟಾಟಾ ಸುಮೋ ಚಾಲಕನಿಗೆ ಹಲ್ಲೆಗೈದ ಘಟನೆ ಬಜಾಲ್ ಕ್ರಾಸ್ ಬಳಿ ಸೋಮವಾರ ನಡೆದಿದೆ.
ರೋಶನ್ ಡಿಸೋಜ ಎಂಬವರು ತನ್ನ ಅಣ್ಣನ ಟಾಟಾ ಸುಮೋವನ್ನು ಪಂಪ್‌ವೆಲ್ ಸಮೀಪದ ತಾರೆತೋಟ ಎಂಬಲ್ಲಿ ರಿಪೇರಿ ಮಾಡಿಸಿ ಮನೆಗೆ ಮರಳುತ್ತಿದ್ದಾಗ ಬಜಾಲ್ ಕ್ರಾಸ್ ಬಳಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರನಿಗೆ ಗಾಯವಾಗಿದೆ. ಇದರಿಂದ ಸಿಟ್ಟಾದ ಮಹಾಂತೇಶ್ ಸಹಿತ 10-15 ಮಂದಿ ಟಾಟಾ ಸುಮೋ ಚಾಲಕ ರೋಶನ್‌ಗೆ ಹಲ್ಲೆ ನಡೆಸಿ ವಾಹನಕ್ಕೆ ಹಾನಿಗೈದಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





