ಜೂ.25: ಶ್ರೀನಿವಾಸ್ ಬಜಾಲ್ ಹುತಾತ್ಮ ದಿನ
ಮಂಗಳೂರು, ಜೂ.20: ಜಿಲ್ಲೆಯಲ್ಲಿ ಯುವಜನ ಚಳುವಳಿಗೆ ನಾಯಕತ್ವ ನೀಡಿದ ಬಜಾಲ್ ಪರಿಸರದ ವಿದ್ಯಾರ್ಥಿ ಯುವಜನರ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಐಕ್ಯತೆಗಾಗಿ ಶ್ರಮಿಸಿದ ಶ್ರೀನಿವಾಸ್ ಬಜಾಲ್ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಹದಿನೈದು ವರ್ಷ ಸಂದುತ್ತಿದೆ.
ಇವರ ಈ ಹುತಾತ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂ.25ರಂದು ಬಜಾಲ್ ಸಂತ ಜೋಸೆಫರ ಪೌಢಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





