ರೋಟರಿ ಕ್ಲಬ್‌ನಿಂದ 14 ಕುಟಂಬಗಳಿಗೆ ಶೌಚಾಲಯ, ಶುಚಿತ್ವ ಪರಿಕರ ವಿತರಣೆ
.jpg)
ಮೂಡುಬಿದಿರೆ,ಜೂ.20: ಇಲ್ಲಿನ ರೋಟರಿ ಕ್ಲಬ್‌ನ ರೋಟರಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ರೋಟಲೆಟ್ಸ್ ಯೋಜನೆಯಡಿ ಪರಿಸರದ 14 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿದ್ದು ಇದರ ಶುಚಿತ್ವ ಪರಿಕರಗಳನ್ನು ಹಸ್ತಾಂತರಿಸುವ ಕಾರ್ಯಕ್ರಮವು ರೋಟರಿಶಾಲೆಯ "ಸಮ್ಮಿಲನ್" ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಮುರಳಿಕೃಷ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೋಟರಿ ಎಜ್ಯುಕೇಶನ್ ಸೊಸೈಟಿ ಅಧೀನದಲ್ಲಿರುವ ರೋಟರಿ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿ ಮೊದಲ ಬ್ಯಾಚ್‌ನ 10 ಮಂದಿ ಸಿಬಿಎಸ್‌ಸಿ ಟಾಪರ್ಸ್‌ಗಳನ್ನು ಮೂಡುಬಿದಿರೆ ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಾ.ಮುರಳೀಕೃಷ್ಣ ಅಭಿನಂದಿಸಿದರು.
ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ರೋಟಾದ್ರಿಯನ್ನು ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ನಾರಾಯಣ ಪಿ.ಎಂ ವಿದ್ಯಾರ್ಥಿಗಳ ವಿವರ ನೀಡಿದರು. ವಿದ್ಯಾರ್ಥಿಗಳ ಮಾತಾಪಿತರು, ಪ್ರಾಚಾರ್ಯ ವಿನ್ಸೆಂಟ್ ಡಿ’ಕೋ್ತ ಹಾಗು ಶಿಕ್ಷಕ ವರ್ಗದವರನ್ನುನ್ನು ಪುರಸ್ಕರಿಸಲಾಯಿತು.
ಕಾರ್ಯದರ್ಶಿ ಡಾ. ಸುದೀಪ್ ಕುಮಾರ್ ವಂದಿಸಿದರು.