ಪೊಲೀಸ್ ಪದಕ ಪ್ರಕಟ

ಬೆಂಗಳೂರು, ಜೂ.20: ಕೇಂದ್ರದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು 2015-16ನೆ ಸಾಲಿನ ಪೊಲೀಸ್ ಪದಕ ಪ್ರಕಟಿಸಿದ್ದು, ರಾಜ್ಯದ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ.
ರಾಜ್ಯದ ಚನ್ನಪಟ್ಟಣದ(ಒಳಾಂಗಣ) ಪಿಎಸ್ಸೈಐ ಕೆ.ಬಿ.ಶಿವಪ್ರಸಾದ್, ಖಾನಾಪುರದ(ಹೊರಾಂಗಣ) ಎಆರ್‌ಎಸ್ಸೈ ಕೆ.ಎಸ್.ಪಾಟೀಲ್, ಚನ್ನಪಟ್ಟಣದ(ಹೊರಾಂಗಣ) ಎಪಿಸಿ ಆರ್.ಸಿ.ಮಹೇಶ್ ಆಯ್ಕೆಯಾಗಿದ್ದಾರೆ.
ಕೇಂದ್ರ ಸರಕಾರದ ಅಧೀನದಲ್ಲಿರುವ ಹೊಸದಿಲ್ಲಿಯ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು, ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ 2015- 16ನೆ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ತರಬೇತುದಾರರನ್ನು, ತರಬೇತಿ ಸಹಾಯಕರಾದವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪದಕ ನೀಡಲು ತೀರ್ಮಾನಿಸಿದೆ ಎಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಟನೆ ತಿಳಿಸಿದೆ.
Next Story





